ADVERTISEMENT

‘ಸಲ್ಲೂ ನನ್ನ ಗೆಲುವಿನ ಬೆನ್ನೆಲುಬು’

ಬಾಲಿವುಡ್

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 19:30 IST
Last Updated 4 ಡಿಸೆಂಬರ್ 2016, 19:30 IST
‘ಸಲ್ಲೂ ನನ್ನ ಗೆಲುವಿನ ಬೆನ್ನೆಲುಬು’
‘ಸಲ್ಲೂ ನನ್ನ ಗೆಲುವಿನ ಬೆನ್ನೆಲುಬು’   

‘ಪ್ಯಾರ್‌ ಕಿಯಾ ತೊ ಡರ್‌ನಾ ಕ್ಯಾ’ ಚಿತ್ರದ ಮೂಲಕ, 1998ರಲ್ಲಿ ಒಂದಾದ ಹಿಮೇಶ್‌ ರೇಷಮಿಯಾ ಮತ್ತು ‘ಬಾಲಿವುಡ್‌ ಸುಲ್ತಾನ್‌’ ಸಲ್ಮಾನ್‌ ಖಾನ್‌  ಅವರದು ಹೆಚ್ಚು ಕಮ್ಮಿ ಎರಡು ದಶಕಗಳ ನಂಟು.

ತಮ್ಮ ಅದ್ಭುತ ಕಂಠದಿಂದ ಎಂತಹುದೇ ಹಾಡುಗಳನ್ನೂ ಜನಮಾನಸದಲ್ಲಿ ಬಹುಕಾಲ ನೆನಪುಳಿಯುವಂತೆ ಮಾಡಬಲ್ಲ ಮೋಡಿಗಾರ ಹಿಮೇಶ್‌ ರೇಷಮಿಯಾ ಅಷ್ಟೇ ಅದ್ಭುತವಾದ ಸಂಗೀತ ಸಂಯೋಜಕ ಹಾಗೂ ನಟ. ತಮ್ಮ ಯಶಸ್ಸಿನ ನಾಗಾಲೋಟದಲ್ಲಿ ಸಲ್ಲೂಭಾಯಿಯ ಪಾತ್ರ ಬಹಳ ದೊಡ್ಡದು ಎಂದು ಮುಕ್ತಕಂಠದಿಂದ ಅವರು ಹೊಗಳಿದ್ದಾರೆ. ಸಲ್ಮಾನ್‌ ಖಾನ್‌ ತಮ್ಮ ಯಶಸ್ಸಿನ ಬೆನ್ನೆಲುಬು ಎಂದು ಹೇಳಿಕೊಂಡಿರುವ ಹಿಮೇಶ್‌, ಅವರೊಂದಿಗೆ ಕೆಲಸ ಮಾಡಲು ತುದಿಗಾಲಲ್ಲಿ ನಿಂತಿರುವುದಾಗಿ ಹೇಳಿದ್ದಾರೆ.

ಸಲ್ಮಾನ್‌ ಅಭಿನಯದ ‘ಪ್ಯಾರ್‌ ಕಿಯಾ...’ ನಂತರ ‘ತೇರೇನಾಮ್‌’, ‘ಬಾಡಿಗಾರ್ಡ್‌’, ‘ಪ್ರೇಮ್‌ ರತನ್‌ ಧನ್‌ ಪಾಯೊ’ದಲ್ಲಿ ಹಿಮೇಶ್‌ ಹಾಡುಗಳಿ ದ್ದವು.  ‘ಸಲ್ಮಾನ್‌ ಅವರು ತುಂಬಾ ಒಳ್ಳೆಯ ಮನಸ್ಸಿನವರು. ಟೈಟಲ್‌ ಸಾಂಗ್‌ಗೆ ಕೂಡಾ ಅವರು ಹಿಂದೆಮುಂದೆ ನೋಡದೆ ಒಪ್ಪಿಕೊಳ್ಳುತ್ತಾರೆ’ ಎಂದೂ ಹಿಮೇಶ್‌ ಮೆಚ್ಚುಗೆಯ ಮಾತನಾಡಿದ್ದಾರೆ.

ಅಂದ ಹಾಗೆ, ಈ ಮಾಂತ್ರಿಕ ಹಾಡುಗಾರ, ‘ಹಿಮೇಶ್‌ ರೇಷಮಿಯಾ ಅಂಡ್‌ ದ ಜ್ಯುವೆಲ್ಸ್‌ ಆಫ್‌ ಇಂಡಿಯಾ’ ಎಂಬ ಭಾರಿ ಯೋಜನೆಗಾಗಿ 700 ಹಾಡುಗಳ ಬ್ಯಾಂಕ್‌ ಹೊಂದಿದ್ದು, ಸಂಗೀತ ಸಂಯೋಜನೆಗೆ ಕುಳಿತರೆ ಜಗತ್ತನ್ನೇ ಮರೆಯುತ್ತಾರಂತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.