ADVERTISEMENT

ಸಾಮಾಜಿಕ ಜಾಲತಾಣದಲ್ಲಿ ಅಪ್ಪು ‘ಹ್ಯಾಪಿ ಬರ್ತ್‌ಡೇ ’

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2017, 19:30 IST
Last Updated 17 ಮಾರ್ಚ್ 2017, 19:30 IST
ಸಾಮಾಜಿಕ ಜಾಲತಾಣದಲ್ಲಿ  ಅಪ್ಪು ‘ಹ್ಯಾಪಿ ಬರ್ತ್‌ಡೇ ’
ಸಾಮಾಜಿಕ ಜಾಲತಾಣದಲ್ಲಿ ಅಪ್ಪು ‘ಹ್ಯಾಪಿ ಬರ್ತ್‌ಡೇ ’   
ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ಪುನೀತ್‌ ರಾಜ್‌ಕುಮಾರ್‌  ಅವರದ್ದೇ ಹವಾ. 
 
‘ರಾಜಕುಮಾರ’ ಚಿತ್ರದ ಟೇಲರ್‌ ಬಿಡುಗಡೆ ಸಂಭ್ರಮ ಒಂದೆಡೆಯಾದರೆ, ಹುಟ್ಟುಹಬ್ಬದ ಸಡಗರ ಮತ್ತೊಂದೆಡೆ. 42ನೇ ವರ್ಷಕ್ಕೆ ಕಾಲಿಟ್ಟಿರುವ ‘ಪವರ್‌ಸ್ಟಾರ್‌’ಗೆ ಚಿತ್ರರಂಗ ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು.
 
ಹಿರಿಯ ನಟಿ ಸುಮಲತಾ ಅಂಬರೀಶ್‌ ಅವರು ಪುನೀತ್‌ ದಂಪತಿಯೊಂದಿಗೆ ಇರುವ ಫೋಟೊವನ್ನು ಟ್ವಿಟರ್‌ನಲ್ಲಿ ಹಾಕಿ, ‘ಅನುದಿನವೂ ಸಂತೋಷದಿಂದಿರು, ಮಿನುಗುತ್ತಿರು’ ಎಂದು ಶುಭ ಕೋರಿದ್ದಾರೆ.
 
ನಟ–ನಟಿಯರಾದ ರಮ್ಯಾ, ವಿದ್ಯಾರಾವ್‌, ಮನ್ವಿತಾ ಹರೀಶ್‌,  ನವೀನ್‌ ಕೃಷ್ಣ, ನಿರೂಪಕ ಅಕುಲ್‌ ಬಾಲಾಜಿ ಅವರೂ ಟ್ವಿಟರ್‌ನಲ್ಲಿ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
ಶಿವರಾಜ್‌ ಕುಮಾರ್‌ ಅಭಿಮಾನಿಗಳ ‘ಶಿವು ಅಡ್ಡಾ’, ಕಿಚ್ಚ ಸುದೀಪ್‌, ಯಶ್‌, ಹಾಸ್ಯನಟ ಚಿಕ್ಕಣ್ಣ, ತೆಲುಗು ನಟ ಅಲ್ಲು ಅರ್ಜುನ್‌, ತಮಿಳು ಸಿನಿತಾರೆಯರಾದ ಸೂರ್ಯ, ವಿಜಯ್‌ ಹಾಗೂ ಕೃತಿ ಕರಬಂಧ, ಕಾಜಲ್‌ ಅಗರ್‌ವಾಲ್‌ ಅಭಿಮಾನಿಗಳ ಕ್ಲಬ್‌ ಖಾತೆಗಳಿಂದಲೂ ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ಪವರ್‌ಸ್ಟಾರ್‌ಗೆ ಶುಭಾಶಯಗಳು ಹರಿದುಬಂದಿವೆ.
 
‘ಬಿಗ್‌ಬಾಸ್‌’ ರಿಯಾಲಿಟಿ ಶೋ ವಿಜೇತ ಪ್ರಥಮ್‌, ನಟಿ ಸಂಜನಾ  ಅವರೂ ಖುದ್ದು ಭೇಟಿಯಾಗಿ ಹುಟ್ಟುಹಬ್ಬಕ್ಕೆ ಶುಭ ಕೋರಿದರು.‘ಅವಮಾನಿತ’ ಎಂಬ ಟ್ವಿಟರ್‌ ಖಾತೆಯಲ್ಲಿ ಪುನೀತ್‌ಗೆ ಬರ್ತ್‌ ಡೇ ಶುಭಕೋರಿದ್ದು ಹೀಗೆ...‘ರಾಜ್‌ ವಂಶದ ಪ್ರತೀಕ/ ನಾಡ ಮನೆಮಗ/ಕರುನಾಡ ರಾಜರತ್ನ/ ಹೆಸರಲ್ಲೇ ಅಪ್ಪಿಕೊಳ್ಳುವ/ ಬೆಳೆದಷ್ಟೂ ಎತ್ತರ/ ಕರೆದಷ್ಟೂ ಹತ್ತಿರ/ ನೋಡಿದಷ್ಟೂ ಚಿಕ್ಕಂವ/ ನಮ್‌ ಮನೆ ಹುಡುಗ
ಯಾಪಿ ಬರ್ತ್‌ ಡೇ ಅಪ್ಪು...’.
ಈ ಖಾತೆಯಲ್ಲಿ ಜಗ್ಗೇಶ್‌ ಅವರಿಗೂ ಇದೇ  ಧಾಟಿಯಲ್ಲಿ ಕಾವ್ಯಾತ್ಮಕ ಶುಭಾಶಯ ಬರೆಯಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.