ADVERTISEMENT

ಸೀರೆ ವಿನ್ಯಾಸದ ಹೊಸ ಪರಿ

ಪ್ರಜಾವಾಣಿ ವಿಶೇಷ
Published 28 ಜುಲೈ 2015, 19:30 IST
Last Updated 28 ಜುಲೈ 2015, 19:30 IST

ಉಡುಪು ವಿನ್ಯಾಸಕರ ಕೈಯೊಳಗೆ ಅರಳುವ ವಿನೂತನ  ವಿನ್ಯಾಸದ ಉಡುಪುಗಳನ್ನು   ಧರಿಸಿ ರ್‍ಯಾಂಪ್ ಮೇಲೆ ಹೆಜ್ಜೆ ಹಾಕುವ ಲಲನೆಯರನ್ನು  ನೋಡುವುದೇ ಸೊಗಸು. ಫ್ಯಾಷನ್ ಡಿಸೈನಿಂಗ್‌ ಕ್ಷೇತ್ರದಲ್ಲಿ  ಹತ್ತು ವರ್ಷ ಅನುಭವ ಪಡೆದಿರುವವರು ಪ್ರಫುಲ್‌ ಶಾ. ನೂತನ ವಿನ್ಯಾಸದ  ಬಾರ್ಡರ್ ಸೀರೆಗಳು, ಡಿಸೈನ್ ಸೀರೆಗಳು, ಸ್ಟೈಲಿಷ್ ಸೀರೆಗಳು, ಡಿಸೈನರ್ ಬಾರ್ಡರ್ ಸೀರೆಗಳು, ಫ್ಯಾನ್ಸಿ ಸೀರೆಗಳಂತ ವಿವಿಧ ಸೀರೆಗಳ ವಿನ್ಯಾಸ ಮಾಡಿರುವ ಅನುಭವ ಹೂಂದಿದ್ದಾರೆ.

*ನಿಮಗೆ ಬಾಲ್ಯದಿಂದಲೂ ಬಟ್ಟೆಗಳ ವಿನ್ಯಾಸದ ಬಗ್ಗೆ ಆಸಕ್ತಿ ಇತ್ತೆ?
ನಾನು ಹುಟ್ಟಿ ಬೆಳೆದದ್ದು ಸೂರತ್‌ನಲ್ಲಿ. ಅಲ್ಲಿನ   ಸುತ್ತಮುತ್ತ ಜವಳಿ ವ್ಯಾಪಾರ  ಜೋರಾಗಿಯೇ ನಡೆಯುತ್ತಿತ್ತು. ಮೊದಲಿನಿಂದಲೂ ಬಟ್ಟೆಗಳ ಡಿಸೈನ್‌ ಹಾಗೂ ವಿನ್ಯಾಸ ನೋಡುತ್ತಾ ಬೆಳೆದ ನನಗೆ  ದಿರಿಸುಗಳ ಮೇಲೆ ವ್ಯಾಮೋಹ  ಹುಟ್ಟಿಕೊಂಡಿತು.  ನಂತರ ಅದೇ ಕ್ಷೇತ್ರವನ್ನು ವೃತ್ತಿ ಬದುಕಿಗಾಗಿ ಆರಿಸಿಕೊಂಡೆ.

*ಯಾವ ವಿನ್ಯಾಸದ ಸೀರೆಗಳು ಯುವಜನತೆಯನ್ನು ಹೆಚ್ಚು ಆಕರ್ಷಿಸುತ್ತವೆ?
ವಿವಿಧ ಬಣ್ಣಗಳ ಅದರಲ್ಲೂ ನೈಸರ್ಗಿಕ ಬಣ್ಣಗಳ ಮಿಶ್ರಣದ ವಿನ್ಯಾಸ ಇರುವ ಡಿಸೈನ್ ಎಂಬ್ರಾಯಿಡರಿ ಸೀರೆಗಳು, ನೂಲಿನ ನೇಯ್ಗೆ ಇರುವ ಸೀರೆಗಳು ಸೇರಿದಂತೆ  ಹೊಸ ಹಾಗೂ ಹಳೆಯ ಎರಡು ವಿನ್ಯಾಸದ ಸೀರೆಗಳನ್ನು ಜನತೆ ಹೆಚ್ಚು ಇಷ್ಟ ಪಡುತ್ತಾರೆ.

*ನಿಮ್ಮ ಈ ವೃತ್ತಿಗೆ ನಿಮ್ಮ ಕುಟುಂಬದವರ ಸಹಕಾರ ಹೇಗಿತ್ತು?
ಫ್ಯಾಷನ್ ಷೋ ನಡೆಯುವ  ಸ್ಥಳಗಳಿಗೆಲ್ಲ ನನ್ನ ತಂದೆ ಹಾಗೂ ಸಹೋದರ ಬರುತ್ತಾರೆ. ಮನೆಯಲ್ಲಿ ಎಲ್ಲರೂ ನನ್ನ ಕೆಲಸಕ್ಕೆ ಚೆನ್ನಾಗಿಯೇ ಸಹಕರಿಸುತ್ತಾರೆ. ಮನೆಯವರ ಸಹಕಾರದಿಂದಲೇ ನಾನು ಇಂದು ಈ ಸ್ಥಾನಕ್ಕೇರಲು ಸಾಧ್ಯವಾಯಿತು.

*ಜೀನ್ಸ್, ಕುರ್ತಾಗಳ ಜಮಾನದ ನಡುವೆ ಸೀರೆಗಳಿಗೆ ಬೇಡಿಕೆ ಹೇಗಿದೆ?
ಮಹಿಳೆಯರು, ಮದುವೆ, ಮುಂಜಿಯಂತಹ ಸಂಭ್ರಮಾಚರಣೆಯಲ್ಲಿ  ಸೀರೆಗಳನ್ನು ಧರಿಸುವುದರಿಂದ ನೂತನ ವಿನ್ಯಾಸದ ಸೀರೆಗಳಿಗೆ ಬೇಡಿಕೆ ಜಾಸ್ತಿ.  ಭಾರತದ ಸೀರೆಗಳಿಗೆ ಇಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಹೆಚ್ಚಿನ ಬೇಡಿಕೆ ಇದೆ.

*ಯಾವ ಯಾವ ರಾಜ್ಯಗಳಲ್ಲಿ ನೀವು ವಿನ್ಯಾಸಗೊಳಿಸಿದ ಸೀರೆಗಳನ್ನು ಪ್ರದರ್ಶಿಸಿದ್ದೀರಿ?
ಆಂಧ್ರಪ್ರದೇಶ, ಗುಜರಾತ್‌, ಮಹಾರಾಷ್ಟ್ರ, ತಮಿಳುನಾಡು ಕರ್ನಾಟಕ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ  ಸೀರೆಗಳ ಪ್ರದರ್ಶನ ಮಾಡಲಾಗುತ್ತದೆ.  ಪ್ರದರ್ಶನಕ್ಕೆ ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ.

*ನಿಮ್ಮ ಸೀರೆಗಳ ಕುರಿತು ಬೆಂಗಳೂರಿಗರ ಪ್ರತಿಕ್ರಿಯೆ ಹೇಗಿದೆ?
ಇಲ್ಲಿನ ಜನ ಹೊಸ ಹಾಗೂ ವಿನೂತನ ವಿನ್ಯಾಸದ ಸೀರೆಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಇಲ್ಲಿ ಸೀರೆಗಳ ಸಂಗ್ರಹದ ಮೋಹ ಇರುವ ಅನೇಕರಿದ್ದಾರೆ.

*ಫ್ಯಾಷನ್ ಡಿಸೈನ್  ಆಸಕ್ತರಿಗೆ ನಿಮ್ಮ ಕಿವಿಮಾತು ಏನು?‌
ಇದು ಸದಾ ಬದಲಾಗುತ್ತಿರುವ ಹಾಗೂ ಆಸಕ್ತಿದಾಯಕ  ಕ್ಷೇತ್ರ. ಹೊಸ ಅವಕಾಶ ಅರಸಿ ಬರುವ ಪ್ರತಿಭೆಗಳಿಗೆ ಇಲ್ಲಿ ಅವಕಾಶ ಹೆಚ್ಚು. ನಾವು ನಮ್ಮದೇ ಶೈಲಿಯಲ್ಲಿ ರಚಿಸಿದ ವಿವಿಧ ವಿನ್ಯಾಸದ  ಸೀರೆಗಳನ್ನು ಅನಾವರಣಗೊಳಿಸಲು ಇಲ್ಲಿ ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT