ADVERTISEMENT

ಸೆಲ್ಫಿ ಯಾಕೆ?

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST
ಶ್ವೇತಾ ಬಸು ಪ್ರಸಾದ್‌
ಶ್ವೇತಾ ಬಸು ಪ್ರಸಾದ್‌   

ಬಹುಭಾಷಾ ನಟಿ ಶ್ವೇತಾ ಬಸು ಪ್ರಸಾದ್‌ಗೆ ಸೆಲ್ಫಿ ಮೇಲೆ ಮೋಹವೇ ಇಲ್ಲವಂತೆ. ‘ಚಿತ್ರೀಕರಣದ ವೇಳೆ ಸಿಗುವ ಬಿಡುವಿನ ಸಮಯದಲ್ಲಿ ಗಾಸಿಪ್‌ ಮಾಡಲೋ, ಸೆಲ್ಫಿ ತೆಗೆದುಕೊಳ್ಳಲೋ  ನಾನು ಇಚ್ಛಿಸುವುದಿಲ್ಲ.  ಏನಾದರೂ ಓದುತ್ತೇನೆ’  ಎನ್ನುತ್ತಾರೆ ಶ್ವೇತಾ.

2002ರಲ್ಲಿ ತೆರೆಕಂಡ  ‘ಮಕ್ಡೆ’ ಚಿತ್ರದ ನಟನೆಗೆ ಶ್ವೇತಾ ಬಸು ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ನಂತರ ‘ಇಕ್ಬಾಲ್‌‘, ‘ಡರ್ನ ಜರೂರಿ ಹೈ’, ‘ಬದ್ರಿನಾಥ್‌ ಕಿ ದುಲ್ಹನಿಯಾ’ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದವರು.

ಇವರು ದಕ್ಷಿಣ ಭಾರತೀಯ  ಚಿತ್ರಗಳಲ್ಲಿ ನಟಿಸಿದ್ದಾರೆ.  ಇದಲ್ಲದೆ ಶ್ವೇತಾ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್‌ ಅವರ ಬಳಿ ‘ಸ್ಕ್ರಿಪ್ಟ್‌ ಸಹಾಯಕಿ’ಯಾಗಿ ದುಡಿದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.