ADVERTISEMENT

ಸೋಲಿನ ಮುಖವಿನ್ನೂ ಪರಿಚಯವಾಗಿಲ್ಲ; ಕತ್ರಿನಾ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2014, 19:30 IST
Last Updated 29 ಸೆಪ್ಟೆಂಬರ್ 2014, 19:30 IST
ಸೋಲಿನ ಮುಖವಿನ್ನೂ ಪರಿಚಯವಾಗಿಲ್ಲ; ಕತ್ರಿನಾ
ಸೋಲಿನ ಮುಖವಿನ್ನೂ ಪರಿಚಯವಾಗಿಲ್ಲ; ಕತ್ರಿನಾ   

‘ಶ್ರಮಪಟ್ಟು ನಿರ್ಮಿಸಿದ ಚಿತ್ರಗಳು ಬಾಕ್ಸ್ಆಫೀಸ್‌ನಲ್ಲಿ ಸೋತಾಗ ಎಂಥವರಿಗೂ ನೋವಾಗುತ್ತದೆ. ನನ್ನ ಸಿನಿಮಾ ಸೋತರೂ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತದೆ’ ಎನ್ನುತ್ತಾರೆ ನಟಿ ಕತ್ರಿನಾ ಕೈಫ್‌.

‘ಯಾವುದೇ ಸಿನಿಮಾ ನಿರ್ಮಾಣವಾಗಬೇಕಾದರೆ ಅದರ ಹಿಂದೆ ಸಾಕಷ್ಟು ಜನರ ಶ್ರಮ ಇರುತ್ತದೆ. ಹೀಗಾಗಿಯೇ ಪ್ರತಿಯೊಬ್ಬರಿಗೂ ಅವರ ಸಿನಿಮಾಗಳು ಪ್ರೇಕ್ಷಕರ ಮನಗೆಲ್ಲಬೇಕು ಎಂಬ ಹಂಬಲ ಇರುತ್ತದೆ. ನಾನು ನಿಜವಾಗಿಯೂ ಅದೃಷ್ಟವಂತೆ. ನಾನು ಅಭಿನಯಿಸಿರುವ ಚಿತ್ರಗಳಲ್ಲಿ ಸಾಕಷ್ಟು ಯಶಸ್ಸು ಕಂಡಿವೆ. ನಟರು ಸೋಲು ಗೆಲುವನ್ನು ಒಂದೇ ರೀತಿ ಸ್ವೀಕರಿಸಬೇಕು. ಆದರೆ ನನಗೆ ಮತ್ತೊಂದು ಮುಖದ ಪರಿಚಯ ಆಗಿಲ್ಲ’ ಎಂದಿದ್ದಾರೆ 31 ವರ್ಷದ ನಟಿ.

‘ಸಿನಿಮಾಗಳ ಸೋಲಿನಿಂದ ನನಗೆ ಬೇಸರವಾಗುತ್ತದೆ. ಹೀಗಾಗಿ ಬಾಕ್ಸ್ ಆಫೀನಲ್ಲಿ ಎಷ್ಟು ಸಿನಿಮಾಗಳು ಯಶಸ್ಸು ಸಾಧಿಸುತ್ತವೆ ಎನ್ನುವುದು ನನ್ನ ವಿಷಯದಲ್ಲಿ ಮಹತ್ವ ಪಡೆಯುತ್ತವೆ. ಪ್ರೇಕ್ಷಕರು ನನ್ನನ್ನು ಒಪ್ಪಿಕೊಂಡಿರುವುದು ನಿಜಕ್ಕೂ ನನ್ನ ಅದೃಷ್ಟ. ನಮ್ಮ ಶ್ರಮದಿಂದ ಅವರು ನಮ್ಮನ್ನು ಇಷ್ಟಪಡುತ್ತಾರೆ’ ಎಂದಿದ್ದಾರೆ ಅವರು.

‘ಹೃತಿಕ್‌ ಹಾಗೂ ನನ್ನ ಜೋಡಿಯನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ‘ಬ್ಯಾಂಗ್ ಬ್ಯಾಂಗ್‌’ ಚಿತ್ರ ಯಾರ ಊಹೆಗೂ ನಿಲುಕುವುದಿಲ್ಲ. ಚಿತ್ರೀಕರಣದ ವೇಳೆ ರಸ್ತೆ ಜಾಮ್ ಆಗಿ ಇಡೀ ತಂಡ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಯಿಂದ ಚಿತ್ರೀಕರಣಕ್ಕೆ ತೊಂದರೆಯಾಗಿ, ತಡವಾಗಿ ಚಿತ್ರೀಕರಣ ಮಾಡಬೇಕಾಯಿತು. ಚಿತ್ರೀಕರಣ ತಂಡ ಪ್ರಾಗ್‌ ತಲುಪಿತ್ತು, ಆಗ ಥಾಯ್ಲೆಂಡ್‌ನಲ್ಲಿ ಬಿರುಗಾಳಿ ಎದ್ದಿತ್ತು. ಅಲ್ಲದೆ ನನಗೂ ಪೆಟ್ಟಾಗಿತ್ತು. ಆ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. ಆದರೂ ಅದು ನನಗೆ ಸವಾಲಿನ ಘಟನೆ ಆಗಿತ್ತು. ಈ ಸಿನಿಮಾದ ಚಿತ್ರೀಕರಣದ ವೇಳೆ ಪ್ರತಿಯೊಬ್ಬರೂ ಒಂದೊಂದು ರೀತಿಯ ಸಂಕಷ್ಟಗಳನ್ನು ಎದುರಿಸಿದ್ದಾರೆ’ ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ವಿವರಣೆ ನೀಡಿದ್ದಾರೆ.

‘ಜಿಂದಗಿ ನಾ ಮಿಲೇಗಿ ದುಬಾರ’ ಚಿತ್ರದಲ್ಲಿ ಮೋಡಿ ಮಾಡಿದ್ದ ಹೃತಿಕ್‌ ಹಾಗೂ ಕತ್ರಿನಾ ಜೋಡಿ  ಮತ್ತೆ ‘ಬ್ಯಾಂಗ್‌ ಬ್ಯಾಂಗ್‌’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ಈ ಚಿತ್ರ ಅಕ್ಟೋಬರ್‌ 2ರಂದು ತೆರೆ ಕಾಣಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.