ADVERTISEMENT

ಹಣ್ಣು, ಸೊಪ್ಪುಗಳ ಜಾತಕ ಫಲ

​ಪ್ರಜಾವಾಣಿ ವಾರ್ತೆ
Published 10 ಜುಲೈ 2014, 19:30 IST
Last Updated 10 ಜುಲೈ 2014, 19:30 IST

ಉತ್ತಮ ಆರೋಗ್ಯಕ್ಕಾಗಿ ತಜ್ಞರು ಸಮತೋಲನ ಆಹಾರ ಸೇವನೆಗೆ ಸಲಹೆ ನೀಡುತ್ತಾರೆ. ಆದರೆ ಇದೇ ಆಹಾರದಲ್ಲಿ ದೇಹದ ನೋವು ನಿವಾರಕ ಗುಣಗಳೂ ಇರುತ್ತವೆ ಎನ್ನುವುದು ಎಷ್ಟೋ ಜನರಿಗೆ ತಿಳಿದಿರುವುದಿಲ್ಲ. ನಿತ್ಯದ ಜಂಜಾಟದಲ್ಲಿ ಬರುವ ಮೈ ನೋವಿಗೆ ಮನೆಯಲ್ಲೇ ದೊರೆಯುವ ಪದಾರ್ಥ ಮತ್ತು ಹಣ್ಣು ಹಂಪಲುಗಳಿಂದ ಪರಿಹಾರವನ್ನು ಕಂಡುಕೊಳ್ಳಬಹುದು.

ಮೈ ನೋವಿಗೆ ಪರಿಹಾರ ನೀಡುವ ಸೊಪ್ಪು ಮತ್ತು ಹಣ್ಣುಗಳ ವಿವರ ಹೀಗಿದೆ.....
  ಚೆರ್ರಿ ಹಣ್ಣಿನ ಸೇವನೆಯಿಂದ ಮೈ ನೋವು ಕಡಿಮೆಯಾಗುತ್ತದೆ. ಹುಳಿ ಮತ್ತು ಸಿಹಿ ಚೆರ್ರಿ ಹಣ್ಣಿನಿಂದ ಲಾಭ ಪಡೆಯಬಹುದು.
ಶುಂಠಿಯನ್ನು ಗಂಟಲು ಮತ್ತು ಹೊಟ್ಟೆ ನೋವಿಗೆ ಬಳಸಲಾಗುತ್ತದೆ. ಆದರೆ ಶುಂಠಿಯಲ್ಲಿ ಉರಿ ಮತ್ತು ಊತವನ್ನು ಕಡಿಮೆ ಮಾಡುವ ಗುಣವೂ ಇದೆ. ದಿನಕ್ಕೆ 500–1,000 ಮಿಲಿ ಗ್ರಾಂ ಶುಂಠಿ ಸೇವಿಸಿದಲ್ಲಿ ಮಾಂಸಖಂಡಗಳಲ್ಲಿನ ಊರಿಯೂತವನ್ನು ಕಡಿಮೆ ಮಾಡಬಹುದು.

ಅರಿಶಿಣದಲ್ಲಿ ರೋಗ ನಿರೋಧಕ ಗುಣ ಇದೆ. ಅರಿಶಿಣ ಸ್ಟಿರಾಯ್ಡ್‌ಗಳಿಂದ ಹೆಚ್ಚಿನ ಊರಿಯೂತ ನಿವಾರಕ ಶಕ್ತಿಯನ್ನು ಹೊಂದಿದೆ. ಇದರಿಂದ ಅರಿಶಿಣ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.

ಕಾಫಿಯಲ್ಲಿರುವ ಕೆಫಿನ್‌ ಸೇವನೆಯಿಂದ ತಲೆನೋವು, ಅರ್ಧ ತಲೆನೋವು ನಿವಾರಣೆಯಾಗುತ್ತದೆ. ಪ್ರತಿದಿನ 200 ಮಿಲಿ ಗ್ರಾಂ ಕೆಫಿನ್‌ ಸೇವನೆಯಿಂದ ತಲೆನೋವು ನಿವಾರಣೆಯಾಗುತ್ತದೆ.  ಆದರೆ ನೆನಪಿರಲಿ ಅತಿಯಾದ ಕೆಫಿನ್‌ ಸೇವನೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗಬಹುದು.

ಬೆರ್ರಿ ಹಣ್ಣಿನ ಗುಂಪಿಗೆ ಸೇರುವ ಎಲ್ಲ ಹಣ್ಣಗಳೂ ನೋವು ನಿವಾರಣ ಗುಣವನ್ನು ಹೊಂದಿರುತ್ತವೆ. ಚೆರ್ರಿ ಹಣ್ಣಿನಷ್ಟೇ ಬೆರ್ರಿ ಹಣ್ಣುಗಳೂ ಸಹ ಮೈ ನೋವನ್ನು ನಿವಾರಿಸುತ್ತವೆ.

ಸೇಜ್‌ ಸಸ್ಯದ ಎಲೆಗಳು ಗಂಟಲು ಕೆರೆತಕ್ಕೆ ಉತ್ತಮ ಔಷಧಿ. ಸೇಜ್‌ ಎಲೆಗಳನ್ನು ಬಳಸಿ ಟೀ ಮಾಡಿ ಕುಡಿಯುವುದರಿಂದ ಗಂಟಲು ಕರೆತ ಕಡಿಮೆಯಾಗುತ್ತದೆ. 

ಅಕ್ರೋಡು (ವಾಲ್‌ನಟ್‌) ಹಾಗೂ ಸೀಮೆ ಅಗಸೆ ಬೀಜಗಳಲ್ಲಿ ಅತಿ ಹೆಚ್ಚು ‘ಒಮೆಗಾ3 ಫ್ಯಾಟಿ ಆ್ಯಸಿಡ್‌’ ಅಂಶ ಇರುತ್ತದೆ. ಇದರಿಂದ ನೋವು ನಿವಾರಣೆಯಾಗುತ್ತದೆ. ಸೀಮೆ ಅಗಸೆ ಎಣ್ಣೆಯಿಂದ ಆಹಾರ ತಯಾರಿಸುವುದರಿಂದ ಕೆರೆತ ಹಾಗೂ ನೋವು ನಿವಾರಣೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.