ADVERTISEMENT

‘ಹಸೀನಾ’ ಟ್ರೇಲರ್‌ ಸಖತ್‌ ಹಿಟ್‌

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
‘ಹಸೀನಾ’ ಟ್ರೇಲರ್‌ ಸಖತ್‌ ಹಿಟ್‌
‘ಹಸೀನಾ’ ಟ್ರೇಲರ್‌ ಸಖತ್‌ ಹಿಟ್‌   

ಶ್ರದ್ಧಾ ಕಪೂರ್‌ಗೆ ಈ ವರ್ಷ ‘ಹಸೀನಾ ಪಾರ್ಕರ್‌’ ಚಿತ್ರ ಅದೃಷ್ಟದ ಬಾಗಿಲು ತೆರಯುತ್ತದೆಯೇ ಎಂಬ ಕುತೂಹಲದ ಚರ್ಚೆ ಇದೀಗ ಶುರುವಾಗಿದೆ. ಅದಕ್ಕೆ ಕಾರಣ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾದ 24 ಗಂಟೆಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿರುವುದು.

ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಸಹೋದರಿ ಹಸೀನಾ ಪಾತ್ರದಲ್ಲಿ ಶ್ರದ್ಧಾ ನಟಿಸಿದ್ದಾರೆ. ಈ ಚಿತ್ರದಲ್ಲಿ ಹಸೀನಾ, ಡಾನ್‌ ಆಪಾ ಆಗಿ ಬದಲಾಗುವ ಕತೆಯನ್ನು ಒಳಗೊಂಡಿದೆ. 17ರಿಂದ 40 ವರ್ಷದವರೆಗಿನ ಹಸೀನಾ ಕತೆ ಈ ಚಿತ್ರದಲ್ಲಿದೆ. ಶ್ರದ್ಧಾ ನಟನೆ ಅಮೋಘವಾಗಿದೆ ಎಂಬುದನ್ನು ಟ್ರೇಲರ್‌ ಸಾಬೀತುಪಡಿಸಿದೆ.

ಟ್ರೇಲರ್‌ ಆರಂಭವಾಗುವುದು ಹಸೀನಾ ಕೋರ್ಟ್‌ಗೆ ಹಾಜರಾಗುವ ದೃಶ್ಯದ ಮೂಲಕ. ಕಣ್ಣು ಮಾತ್ರ ಕಾಣುವ ಹಾಗೆ ಬುರ್ಖಾ ಧರಿಸಿ ಕೋರ್ಟ್‌ಗೆ ಹಾಜರಾಗುವುದು, ಐಷಾರಾಮಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದು, ಕ್ಷಣ ಮಾತ್ರದಲ್ಲಿ ಒಬ್ಬೊಬ್ಬರ ‘ಕತೆ’ ಮುಗಿಸುವುದು... ಹೀಗೆ ನುರಿತ ಖಳ ನಟಿಯಂತೆ ಶ್ರದ್ಧಾ ನಟಿಸಿದ್ದಾರೆ.

ADVERTISEMENT

ನಿರ್ದೇಶಕಿ ಅಪೂರ್ವ ಲಾಖಿಯಾ ಅವರು, ಹಸೀನಾ ಜೀವನ ಸುಖಕರವಾಗಿರಲಿಲ್ಲ. ತನ್ನ ಸಹೋದರ ದಾವೂದ್‌ ಮುಂಬೈ ಸ್ಫೋಟದ ಆರೋಪಿ ಎಂದು ಗೊತ್ತಾದ ಬಳಿಕ ಆಕೆಯ ಜೀವನ ಮತ್ತೂ ಕಷ್ಟಕರವಾಗಿತ್ತು ಎಂಬಂತೆ ಚಿತ್ರಿಸಿದ್ದಾರೆ. ಟ್ರೇಲರ್‌ ನೋಡಿದವರಿಗೆ ದಾವೂದ್‌ಗಿಂತಲೂ ಹಸೀನಾ ಕ್ರೂರಿಯಾಗಿದ್ದಳೇನೋ ಎಂಬ ಅನುಮಾನ ಕಾಡದಿರದು.

ಶ್ರದ್ಧಾ ಸಹೋದರ ಸಿದ್ಧಾಂತ್‌ ಕಪೂರ್‌, ದಾವೂದ್‌ ಪಾತ್ರದಲ್ಲಿ ನಟಿಸಿದ್ದಾರೆ.ರಾಜೇಶ್‌ ತೈಲಾಂಗ್‌, ಅಂಕೂರ್‌ ಭಾಟಿಯಾ, ಸುನಿಲ್‌ ಉಪಾಧ್ಯಾಯ ಅವರೂ ಪಾತ್ರವರ್ಗದಲ್ಲಿದ್ದಾರೆ. ಆಗಸ್ಟ್‌ 18ರಂದು ಚಿತ್ರ ತೆರೆಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.