ADVERTISEMENT

‘ಅಭಿರುಚಿಗೆ ತಕ್ಕ ಹಾಡು’

​ಪ್ರಜಾವಾಣಿ ವಾರ್ತೆ
Published 8 ಮೇ 2016, 19:44 IST
Last Updated 8 ಮೇ 2016, 19:44 IST
‘ಅಭಿರುಚಿಗೆ ತಕ್ಕ ಹಾಡು’
‘ಅಭಿರುಚಿಗೆ ತಕ್ಕ ಹಾಡು’   

‘ಪ್ರೇಕ್ಷಕರ ಅಭಿರುಚಿಗೆ ಅನುಗುಣವಾಗಿ ಸಿನಿಮಾ ಗೀತೆಗಳನ್ನು ರಚಿಸಲಾಗುತ್ತಿದೆ’ ಎಂದು ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಹೇಳಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ತಮ್ಮ ಹೊಸ ಸಿನಿಮಾ ‘ಹೌಸ್‌ಫುಲ್‌ 3’ದ ಹಾಡನ್ನು ಬಿಡುಗಡೆ ಮಾಡಿ ಮಾತನಾಡಿದ ಅಕ್ಷಯ್‌, ಸಿನಿಮಾ ಗೀತೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

‘ದ್ವಂದ್ವಾರ್ಥದ ಗೀತೆಗಳು ಹಿಂದಿ ಚಿತ್ರರಂಗಕ್ಕೆ ಹೊಸದೇನಲ್ಲ’ ಎನ್ನುವ ಅವರು ತಮ್ಮ ಮಾತಿಗೆ ‘ಚೋಲಿ ಕೆ ಪೀಚೆ ಕ್ಯಾ ಹೈ’ ಹಳೆ ಚಿತ್ರಗೀತೆಯ ಉದಾಹರಣೆಯನ್ನೂ ಕೊಡುತ್ತಾರೆ.

‘ಜನರ ಅಭಿರುಚಿ ಬದಲಾದಂತೆ ಗೀತೆಗಳ ಸಾಹಿತ್ಯವೂ ಬದಲಾಗುತ್ತದೆ. ಜನರಿಗೆ ಏನು ಬೇಕೋ ಅದನ್ನು ನಾವು ಮಾಡುತ್ತೇವೆ’ ಎನ್ನುವುದು ಅವರ ಸಮರ್ಥನೆ.‘ಹೌಸ್‌ ಫುಲ್‌ 3’ ಸಿನಿಮಾದ ಇಂಥದ್ದೇ ಹಾಡೊಂದಕ್ಕೆ ಮಿಕಾ ಸಿಂಗ್‌ ಧ್ವನಿಯಾಗಿದ್ದಾರೆ. ಈ ಚಿತ್ರದ ನಿರ್ಮಾಪಕರಾದ ಸಾಜಿದ್‌ ನಾದಿಯಾದ್‌ವಾಲಾ ಕೂಡ ಅಕ್ಷಯ ಕುಮಾರ್‌ ಅಭಿಪ್ರಾಯವನ್ನು ಬೆಂಬಲಿಸಿದ್ದಾರೆ.

ಸಾಜಿದ್‌ ಪರ್ಹಾದ್‌ ನಿರ್ದೇಶನದ ‘ಹೌಸ್‌ ಫುಲ್‌ 3’ ಸಿನಿಮಾದಲ್ಲಿ ಅಕ್ಷಯ್ ಜತೆಗೆ ಅಭಿಷೇಕ ಬಚ್ಚನ್‌, ರಿತೇಶ್‌ ದೇಶಮುಖ್‌, ಜಾಕ್ವೆಲಿನ್‌ ಫರ್ನಾಂಡೀಸ್‌, ನರ್ಗೀಸ್‌ ಫಕ್ರಿ ಸಹ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಜೂನ್‌ ತಿಂಗಳ ಮೊದಲ ವಾರದಲ್ಲಿ ಸಿನಿಮಾ ಬಿಡುಗಡೆಯಾಗಲಿರುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.