ADVERTISEMENT

‘ಮಿ. ಮೊಮ್ಮಗ’ನಿಗೆ ಹಾಡಿನ ಚಿತ್ರೀಕರಣ

​ಪ್ರಜಾವಾಣಿ ವಾರ್ತೆ
Published 10 ಮೇ 2016, 19:30 IST
Last Updated 10 ಮೇ 2016, 19:30 IST
‘ಮಿ. ಮೊಮ್ಮಗ’ನಿಗೆ ಹಾಡಿನ ಚಿತ್ರೀಕರಣ
‘ಮಿ. ಮೊಮ್ಮಗ’ನಿಗೆ ಹಾಡಿನ ಚಿತ್ರೀಕರಣ   

ರಘುಗೌಡ ನಿರ್ಮಾಣದ ‘ಮಿ. ಮೊಮ್ಮಗ’ ಚಿತ್ರಕ್ಕೆ ‘ಬಟ್ಟಲು ಕಣ್ಣಲ್ಲೇ ಕೊಟ್ಟಳು ಸನ್ನೆ’ ಎಂಬ ಹಾಡನ್ನು ಈಚೆಗೆ ಚಿತ್ರೀಕರಿಸಲಾಯಿತು. ತಾತ ಮತ್ತು ಮೊಮ್ಮಗನ ಬಾಂಧವ್ಯದ ಕಥಾವಸ್ತುವುಳ್ಳ ಈ ಚಿತ್ರವು ತಮಿಳಿನ ‘ಮಂಜಾಪೈ’ ರೀಮೇಕ್. ಮೂಲ ಚಿತ್ರದ ನಿರ್ದೇಶಕರೇ ಕನ್ನಡದಲ್ಲೂ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಮಳವಳ್ಳಿ ಸಾಯಿಕೃಷ್ಣ, ನಾಗೇಂದ್ರ ಪ್ರಸಾದ್ ಗೀತಸಾಹಿತ್ಯ, ರಘುನಂದನ್ ಸಂಗೀತ, ದೇವ ರಾಘವನ್ ಸಂಕಲನ ಇದೆ. ರವಿ, ಓವಿಯಾ, ರಂಗಾಯಣ ರಘು, ಅವಿನಾಶ್, ಕುರಿ ಪ್ರತಾಪ್, ಮುಂತಾದವರು ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.