ADVERTISEMENT

‘ಸುಗಮ ಸಂಗೀತದ ಪಠ್ಯ ಬೇಕು’

​ಪ್ರಜಾವಾಣಿ ವಾರ್ತೆ
Published 27 ಜುಲೈ 2015, 19:30 IST
Last Updated 27 ಜುಲೈ 2015, 19:30 IST

ಬೆಂಗಳೂರು ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇತ್ತೀಚೆಗೆ ಇಂಚರ ಸುಗಮ ಸಂಗೀತ ಸಂಸ್ಥೆ ಆಯೋಜಿಸಿದ್ದ ‘ಯುವ ಸಂಗೀತೋತ್ಸವ-2015’ ಕಾರ್ಯಕ್ರಮವನ್ನು ಪ್ರವೀಣ್ ಗೋಡ್ಖಿಂಡಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಹಳೆಯ ಜನಪ್ರಿಯ ಗೀತೆಗಳನ್ನೇ ಇಂದಿಗೂ ನಮ್ಮ ಸುಗಮ ಸಂಗೀತ ಗಾಯಕ ಗಾಯಕಿಯರು ಹಾಡುತ್ತಾ ಬಂದಿದ್ದಾರೆ. ಆದರೆ ಹೊಸ ಸಂಯೋಜನೆಯ ಗೀತೆಗಳು ಹಾಗೂ ಸಾಹಿತ್ಯವನ್ನು ಹಾಡುವುದು ಈಗ ಅತ್ಯವಶ್ಯಕ. ಆದ್ದರಿಂದ ಸಾಧ್ಯವಾದಷ್ಟೂ ಹೊಸ ಸಂಯೋಜನೆಯ ಗೀತೆಯನ್ನು ನಮ್ಮ ಗಾಯಕ ಗಾಯಕಿಯರು ಹಾಡಬೇಕು’ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆನಂದ್ ಮಾದಲಗೆರೆ ಎಲ್ಲ ರೀತಿಯ ಸಂಗೀತಕ್ಕೂ ಅದರದೇ ಆದ ಪಠ್ಯಪುಸ್ತಕ ಇದ್ದು, ಸುಗಮ ಸಂಗೀತಕ್ಕೆ ಮಾತ್ರ ಇಲ್ಲದಿರುವುದು ವಿಷಾದಕರ. ಸುಗಮ ಸಂಗೀತಕ್ಕೆ ಒಂದು ಪಠ್ಯಪುಸ್ತಕದ ಅವಶ್ಯಕತೆ ಇದೆ’ ಎಂದರು. ರಾಜಗೋಪಾಲ್ ಕಲ್ಲೂರ್‌ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.