‘ಈವರೆಗೆ ಡಿಜಿಟಲ್ ಭಾರತ ಅಭಿಯಾನವನ್ನು ಲೇವಡಿ ಮಾಡುತ್ತಿದ್ದ ಕಾಂಗ್ರೆಸ್, ಈಗ ಡಿಜಿಟಲ್ ರೂಪದಲ್ಲೇ ಭಿಕ್ಷೆ ಬೇಡುತ್ತಿದೆ’ ಎಂಬ ಬರಹ ಇರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಯುಪಿಐ ಪೇಮೆಂಟ್‌ನ ಕ್ಯುಆರ್ ಕೋಡ್ ಮಾದರಿಯ ಚಿತ್ರವನ್ನೂ ಇಂತಹ ಪೋಸ್ಟ್‌ಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಕೋಡ್‌ನ ಮೇಲೆ ‘ಪೇಫಾರ್‌ದೇಶ್’ ಎಂದು ಬರೆಯಲಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಚಿತ್ರವೂ ಕ್ಯುಆರ್ ಕೋಡ್‌ನಲ್ಲಿ ಇದೆ. ಆದರೆ ಇದು ತಿರುಚಲಾದ ಕ್ಯುಆರ್ ಕೋಡ್.
ಕಾಂಗ್ರೆಸ್ 2023ರ ಡಿಸೆಂಬರ್‌ನಲ್ಲಿ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿತ್ತು. ಡಿಜಿಟಲ್ ರೂಪದಲ್ಲಿ ದೇಣಿಗೆ ನೀಡಬಯಸುವವರಿಗೆ, ಕ್ಯುಆರ್ ಕೋಡ್ ಅನ್ನೂ ಬಿಡುಗಡೆ ಮಾಡಿತ್ತು. ಆ ಕ್ಯುಆರ್ ಕೋಡ್‌ನಲ್ಲಿ ಪಕ್ಷದ ಚಿಹ್ನೆಯಾದ ಹಸ್ತದ ಗುರುತು ಇತ್ತು. ಸೋನಿಯಾ ಗಾಂಧಿ ಅವರ ಚಿತ್ರವಿರುವ ಕ್ಯುಆರ್ ಕೋಡ್ ಅನ್ನು ಕಾಂಗ್ರೆಸ್ ಬಿಡುಗಡೆ ಮಾಡಿಲ್ಲ. ಹೀಗಾಗಿ ಇದೊಂದು ತಿರುಚಲಾದ ಕ್ಯುಆರ್ ಕೋಡ್ ಎಂದು ಪಿಟಿಐ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.