ADVERTISEMENT

ಅಂಡಮಾನ್‌ನ ಬರೇನ್‌ ಅಗ್ನಿಪರ್ವತದಿಂದ ಚಿಮ್ಮುತ್ತಿದೆ ಜ್ವಾಲಾಮುಖಿ

ಏಜೆನ್ಸೀಸ್
Published 19 ಫೆಬ್ರುವರಿ 2017, 16:01 IST
Last Updated 19 ಫೆಬ್ರುವರಿ 2017, 16:01 IST
ಅಂಡಮಾನ್‌ನ ಬರೇನ್‌ ಅಗ್ನಿಪರ್ವತದಿಂದ ಚಿಮ್ಮುತ್ತಿದೆ ಜ್ವಾಲಾಮುಖಿ
ಅಂಡಮಾನ್‌ನ ಬರೇನ್‌ ಅಗ್ನಿಪರ್ವತದಿಂದ ಚಿಮ್ಮುತ್ತಿದೆ ಜ್ವಾಲಾಮುಖಿ   

ಪೋರ್ಟ್‌ಬ್ಲೇರ್‌: ಭಾರತದ ಆರು ಅಗ್ನಿಪರ್ವತಗಳ ಪೈಕಿ ಅಂಡಮಾನ್‌ – ನಿಕೋಬಾರ್‌ ದ್ವೀಪದ ಬರೇನ್‌ ಅಗ್ನಿಪರ್ವತ ಜ್ವಾಲಾಮುಖಿ ಉಗುಳುತ್ತಿದೆ ಎಂಬ ಅಂಶವನ್ನು ಸಂಶೋಧಕರು ಹೊರಹಾಕಿದ್ದಾರೆ.

ಪೋರ್ಟ್‌ಬ್ಲೇರ್‌ನಿಂದ ಉತ್ತರಕ್ಕೆ 140 ಕಿ.ಮೀ. ದೂರದಲ್ಲಿ ಬರೇನ್‌ ಅಗ್ನಿಪರ್ವತವಿದೆ. ಗೋವಾದ ಎನ್ಐಒ (National Institute of Oceanography) ಸಂಸ್ಥೆಯ ತಂಡ ಇತ್ತೀಚೆಗೆ ಬರೇನ್‌ ಅಗ್ನಿಪರ್ವತದ ಸಮೀಪಕ್ಕೆ ಸಂಶೋಧನೆಗೆ ತೆರಳಿತ್ತು. ಈ ವೇಳೆ ಅಗ್ನಿಪರ್ವತದಿಂದ ಜ್ವಾಲಾಮುಖಿ ಹೊರಬರುತ್ತಿರುವುದು ತಿಳಿದುಬಂದಿದೆ.

ಈ ಅಗ್ನಿಪರ್ವತದಿಂದ 1787ರಲ್ಲಿ ಮೊದಲ ಬಾರಿಗೆ ಜ್ವಾಲಾಮುಖಿ ಚಿಮ್ಮಿತ್ತು. ಬಳಿಕ 1991ರಲ್ಲಿ ಈ ಅಗ್ನಿಪರ್ವತ ಜ್ವಾಲಾಮುಖಿ ಉಗುಳಿತ್ತು. ಸ್ಫೋಟಗೊಂಡ ಆರಂಭದಿಂದ ಇಲ್ಲಿಯವರೆಗೆ ಈ ಅಗ್ನಿಪರ್ವತ 11 ಬಾರಿ ಲಾವಾ ರಸ ಚಿಮ್ಮಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ADVERTISEMENT

‘ಈ ವರ್ಷದ ಜನವರಿಯಿಂದ ಅಗ್ನಿಪರ್ವತದಿಂದ ಜ್ವಾಲಾಮುಖಿ ಚಿಮ್ಮುತ್ತಿದೆ. ಹಗಲು ಈ ಅಗ್ನಿಪರ್ವತದಿಂದ ಕೇವಲ ಹೊಗೆ ಏಳುತ್ತಿರುವಂತೆ ಕಾಣುತ್ತದೆ. ಆದರೆ ಸೂರ್ಯ ಮುಳುಗುತ್ತಿದ್ದಂತೆ ಅಗ್ನಿಪರ್ವತದಿಂದ ಜ್ವಾಲಾಮುಖಿ ಚಿಮ್ಮುವುದು ಕಾಣುತ್ತದೆ’ ಎಂದು ಸಂಶೋಧನಾ ತಂಡದ ನೇತೃತ್ವ ವಹಿಸಿದ್ದ ಅಭಯ್‌ ಮುಧೋಳ್ಕರ್‌ ತಿಳಿಸಿದ್ದಾರೆ.


ಭಾರತದ ಆರು ಅಗ್ನಿಪರ್ವತಗಳು
1. ಬರೇನ್‌ (ಅಂಡಮಾನ್‌)
2. ನಾರ್ಕೊಂಡಮ್‌ (ಅಂಡಮಾನ್‌)
3. ಬರತಂಗ್‌ (ಅಂಡಮಾನ್‌)
4. ಡೆಕನ್‌ ಟ್ರಾಪ್ಸ್‌ (ಮಹಾರಾಷ್ಟ್ರ)
5. ಧಿನೋಧರ್‌ ಪರ್ವತ (ಗುಜರಾತ್‌)
6. ಧೋಸಿ ಪರ್ವತ (ಹರಿಯಾಣ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.