ADVERTISEMENT

ಅಕಾಡೆಮಿ ಪ್ರಶಸ್ತಿ ಮರಳಿಸಲು ಸಾರಾ ಜೋಸೆಫ್‌ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2015, 8:35 IST
Last Updated 10 ಅಕ್ಟೋಬರ್ 2015, 8:35 IST

ತಿರುವನಂತಪುರಂ (ಪಿಟಿಐ): ದೇಶದಲ್ಲಿ ಹೆಚ್ಚುತ್ತಿರುವ ಕೋಮುವಾದವನ್ನು ಪ್ರತಿಭಟಿಸಿ ಖ್ಯಾತ ಮಲಯಾಳಂ ಲೇಖಕಿ ಮತ್ತು ಎಎಪಿ ನಾಯಕಿ  ಸಾರಾ ಜೋಸೆಫ್‌ ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಾಪಸ್‌ ನೀಡಲು ಶನಿವಾರ ನಿರ್ಧರಿಸಿದ್ದಾರೆ.

ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ, ಹಿಂದಿ ಕವಿ ಅಶೋಕ್‌ ವಾಜಪೇಯಿ ಮತ್ತು ಇಂಗ್ಲೀಷ್‌ ಲೇಖಕಿ ನಯನ್‌ತಾರಾ ಸೆಹಗಲ್‌ ಅವರು  ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು  ಇತ್ತೀಚೆಗಷ್ಟೇ ವಾಪಸ್‌ ಮಾಡಿದ್ದರು. ಅವರ ಬೆನ್ನಲ್ಲೇ ಸಾರಾ ಜೋಸೆಫ್‌ ಕೂಡ ಪ್ರಶಸ್ತಿ ಮರಳಿಸಲು ನಿರ್ಧರಿಸಿದ್ದಾರೆ.

ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದ ನಂತರ, ಲೇಖಕರು ಜೀವ ಬೆದರಿಕೆ ಎದುರಿಸುತ್ತಿದ್ದಾರೆ. ಕೋಮುವಾದ ಹೆಚ್ಚುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸಾರಾ ಅವರ ‘ಆಲಾಹಯುಡೆ ಪೆಣ್‌ಮಕ್ಕಳ್‌’ ಎಂಬ ಕೃತಿಗೆ ಪ್ರತಿಷ್ಠಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಪ್ರಶಸ್ತಿ ಸ್ಮರಣಿಕೆ ಮತ್ತು ನಗದನ್ನು ಶೀರ್ಘ್ರದಲ್ಲೇ ಕೊರಿಯರ್‌ ಮೂಲಕ ಅಕಾಡೆಮಿಗೆ ಮರಳಿಸುವುದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT