ADVERTISEMENT

ಅಪಘಾತದಲ್ಲಿ ಭಗತ್‌ಸಿಂಗ್ ಮೊಮ್ಮಗ ಸಾವು

​ಪ್ರಜಾವಾಣಿ ವಾರ್ತೆ
Published 29 ಮೇ 2016, 9:28 IST
Last Updated 29 ಮೇ 2016, 9:28 IST
ಅಪಘಾತದಲ್ಲಿ ಭಗತ್‌ಸಿಂಗ್ ಮೊಮ್ಮಗ ಸಾವು
ಅಪಘಾತದಲ್ಲಿ ಭಗತ್‌ಸಿಂಗ್ ಮೊಮ್ಮಗ ಸಾವು   

ನವದೆಹಲಿ: ಭಗತ್ ಸಿಂಗ್ ಅವರ ಮೊಮ್ಮಗ ಅಭಿತೇಜ್ ಸಿಂಗ್ ಸಂಧು (22) ಭಾನುವಾರ ರಸ್ತೆ ಅಫಘಾತದಲ್ಲಿ ಮೃತಪಟ್ಟಿದ್ದಾರೆ.

ಹಿಮಾಚಲ ಪ್ರದೇಶದ ರಾಮಪುರ ಬಳಿಯ ಬುಶಹರ್‌ನಲ್ಲಿ ಅಭಿತೇಜ್‌ ಅವರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಅಭಿತೇಜ್‌ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅಭಿತೇಜ್ ಅವರ ತಂದೆ ಅಭಯ್‌ ಸಿಂಗ್, ಭಗತ್‌ ಸಿಂಗ್ ಅವರ ಕಿರಿಯ ಸಹೋದರ. ಅಭಿತೇಜ್‌ ಅವರ ಸಾವಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಭಿತೇಜ್‌ ಸಿಂಗ್ ಹಲವು ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಅಕ್ಟೋಬರ್ 27, 2015ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ಅವರು ಸಂವಾದವೊಂದರಲ್ಲಿ ಮಾತನಾಡುತ್ತಾ, ‘ಅಸಹಿಷ್ಣುತೆ ದೇಶಕ್ಕೆ ಅಪಾಯ’ ಎಂದು ಎಚ್ಚರಿಸಿದ್ದರು. ಅವರ ಭಾಷಣದ ಪೂರ್ಣ ಪಾಠ ಇಲ್ಲಿದೆ.
http://goo.gl/eY5Ti1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT