ADVERTISEMENT

ಅ.31ಕ್ಕೆ ಗುಜರಾತ್ ಕರಾವಳಿಗೆ ನಿಲೋಫರ್ ಚಂಡಮಾರುತ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2014, 19:30 IST
Last Updated 27 ಅಕ್ಟೋಬರ್ 2014, 19:30 IST

ಅಹಮದಾಬಾದ್ (ಪಿಟಿಐ): ಅರಬ್ಬಿ ಸಮುದ್ರದ ಪಶ್ಚಿಮ ಭಾಗದಲ್ಲಿ ಉಂಟಾಗಿರುವ ನಿಲೋಫರ್ ಚಂಡಮಾರುತವು ಅ.31ರಂದು ಗುಜರಾತ್‌ನ ಕರಾವಳಿಯ ಕಛ್‌ನ ನಾಲಿಯಾ ಗ್ರಾಮದ ಬಳಿ ಅಪ್ಪಳಿಸಲಿದ್ದು, ಬಿರುಗಾಳಿ ಸಹಿತ ಭಾರಿ ಮಳೆ ಸಂಭವಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.  

ಈಗ ಚಂಡಮಾರುತವು ಅರಬ್ಬಿ ಸಮುದ್ರದ ಪಶ್ಚಿಮ ಭಾಗದಲ್ಲಿದೆ.  ಮುಂದಿನ 24 ಗಂಟೆಗಳಲ್ಲಿ ಉತ್ತರ ದಿಕ್ಕಿನತ್ತ ಸಾಗಲಿದೆ. ಚಂಡಮಾರುತವು ಅ.31ರಂದು ಗುಜರಾತ್ ಮತ್ತು ಪಾಕಿಸ್ತಾನದ ಕರಾವಳಿಯನ್ನು ಪ್ರವೇಶಿಸ­ಲಿದೆ. ಈ ಹೊತ್ತಿಗೆ ಚಂಡಮಾರುತದ ತೀವ್ರತೆ ಕುಗ್ಗಲಿದೆ. ಆದರೂ ಈ ಪ್ರದೇಶಗಳು ಭಾರಿ ಮಳೆ ಮತ್ತು ವೇಗದ ಬಿರುಗಾಳಿಯನ್ನು ಎದುರಿಸಲಿವೆ ಎಂದು ಅಹಮದಾಬಾದ್‌ನ ಹವಾಮಾನ ಕೇಂದ್ರದ ಹೆಚ್ಚುವರಿ ನಿರ್ದೇಶಕಿ ಮನೋರಮಾ ಮೊಹಾಂತಿ ಹೇಳಿದ್ದಾರೆ.

ಕರಾವಳಿಯ ಅಬ್ದಾಸ ಮತ್ತು ಲಕ್‌ಪತ್ ತಾಲ್ಲೂಕುಗಳ 59 ಗ್ರಾಮಗಳ ಜನರನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರ­ರಿಗೆ ಮೀನುಗಾರಿಕಾ ಇಲಾಖೆಯೂ ಸೂಚನೆ ನೀಡಿದೆ. ಕಛ್ ವ್ಯಾಪ್ತಿಯ ಬಂದರುಗಳಲ್ಲಿ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.