ADVERTISEMENT

ಆಂಧ್ರದಲ್ಲಿ ಗೇಲ್‌ ಪೈಪ್‌ಲೈನ್‌ ಸ್ಫೋಟ: 14 ಸಾವು

​ಪ್ರಜಾವಾಣಿ ವಾರ್ತೆ
Published 27 ಜೂನ್ 2014, 7:08 IST
Last Updated 27 ಜೂನ್ 2014, 7:08 IST

ಹೈದರಾಬಾದ್‌(ಪಿಟಿಐ): ಆಂಧ್ರಪ್ರ­ದೇಶದ ಪೂರ್ವ ಗೋದಾವರಿ ಜಿಲ್ಲೆ­ಯ ಅಮಲಾಪುರಂ ಮಂಡಲದ ನಾಗಾ­ರಾಮ್‌ ಗ್ರಾಮದಲ್ಲಿ  ಶುಕ್ರವಾರ ಬೆಳಿಗ್ಗೆ ಸಂಭವಿಸಿದ  ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾದ (ಗೇಲ್‌)  ಪೈಪ್‌ ಲೈನ್‌ ಸ್ಫೋಟದಲ್ಲಿ ಕನಿಷ್ಠ 14 ಜನರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂ­ಡಿದ್ದಾರೆ.

ಸದ್ಯಕ್ಕೆ ಲಭ್ಯವಿರುವ ಪ್ರಾಥಮಿಕ ವರದಿಗಳ ಪ್ರಕಾರ, ಘಟನೆಯಲ್ಲಿ 14 ಜನರು ಮೃತಪಟ್ಟಿದ್ದಾರೆ. ಗಾಯ­ಗೊಂಡ­ವರಲ್ಲಿ ಕೆಲವರ ಸ್ಥಿತಿ ಚಿಂತಾಜ­ನಕವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಆಂಧ್ರಪ್ರ­ದೇಶದ ಹಣಕಾಸು ಸಚಿವ ವೈ. ರಾಮಕೃಷ್ಣ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. 

ಜಿಲ್ಲಾಡಳಿತ ನೀಡಿರುವ ವರದಿಯಂತೆ ಘಟನೆ ಸ್ಥಳದಲ್ಲಿ 13 ಮೃತದೇಹ­ಗಳನ್ನು ಪತ್ತೆ ಹಚ್ಚಲಾಗಿದೆ. ಒಬ್ಬರು ಆಸ್ಪತ್ರೆ­ಯಲ್ಲಿ ಮೃತಪಟ್ಟಿದ್ದಾರೆ.

‘ಈ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ’ ಎಂದು ಪೂರ್ವ ಗೋಧಾವರಿ  ಜಿಲ್ಲಾಧಿಕಾರಿ ನೀತು ಕುಮಾರಿ ಪ್ರಸಾದ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT