ADVERTISEMENT

ಆಡಳಿತದಲ್ಲಿ ಆರೆಸ್ಸೆಸ್‌ ಹಸ್ತಕ್ಷೇಪವಿಲ್ಲ: ರಾಜನಾಥ್

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2015, 10:51 IST
Last Updated 5 ಸೆಪ್ಟೆಂಬರ್ 2015, 10:51 IST

ಪುಣೆ, ಮಹಾರಾಷ್ಟ್ರ (ಪಿಟಿಐ): ಆರೆಸ್ಸೆಸ್‌ ಹಿಂಬಾಗಿಲಿನ ಮೂಲಕ ಸರ್ಕಾರವನ್ನು ನಡೆಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ತಳ್ಳಿಹಾಕಿದ್ದಾರೆ.

‘ನಾನು ಹಾಗೂ ಪ್ರಧಾನಿ ಇಬ್ಬರೂ ಆರೆಸ್ಸೆಸ್‌ ಸ್ವಯಂ ಸೇವಕರು. ಇದರಿಂದ ಯಾರಿಗೇನು ಸಮಸ್ಯೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಸಮಾರಂಭವೊಂದರ ಅಂಗವಾಗಿ ಮಾತನಾಡಿದ ಅವರು, ಮೋದಿ ಸರ್ಕಾರವನ್ನು ಆರೆಸ್ಸೆಸ್‌ ನಡೆಸುತ್ತಿದೆ ಎಂಬ ಆರೋಪವನ್ನು ಅಲ್ಲಗಳೆದರು. ‘ಅದರಲ್ಲಿ ಸತ್ಯಾಂಶವಿಲ್ಲ. ಆರೋಪವು ಸಂಪೂರ್ಣ ಆಧಾರರಹಿತ’ ಎಂದರು.

ADVERTISEMENT

ಅಲ್ಲದೇ, ಕೇಂದ್ರ ಸಚಿವರು ಆರೆಸ್ಸೆಸ್‌ ನಾಯಕತ್ವದ ಸಭೆಗೆ ಹಾಜರಾಗುವ ಮೂಲಕ ಅಧಿಕಾರ ಗೌಪ್ಯತೆಗೆ ಚ್ಯುತಿಯುಂಟು ಮಾಡಿದ್ದಾರೆ ಎಂಬ ಆರೋಪವನ್ನೂ ಅವರು ಅಲ್ಲಗಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.