ADVERTISEMENT

ಆದರ್ಶ್‌ ಹೌಸಿಂಗ್‌ ಸೊಸೈಟಿ ಹಗರಣ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2016, 19:30 IST
Last Updated 29 ಏಪ್ರಿಲ್ 2016, 19:30 IST
ಆದರ್ಶ್‌ ಹೌಸಿಂಗ್‌ ಸೊಸೈಟಿ ಹಗರಣ
ಆದರ್ಶ್‌ ಹೌಸಿಂಗ್‌ ಸೊಸೈಟಿ ಹಗರಣ   

ಏನಿದು ಹಗರಣ?
ಕಾರ್ಗಿಲ್‌ ಯೋಧರು ಮತ್ತು ಕಾರ್ಗಿಲ್‌ ಯುದ್ಧದಲ್ಲಿ ಮಡಿದ ಸೈನಿಕರ ವಿಧವೆಯರಿಗೆ ವಸತಿ ಕಲ್ಪಿಸಲು ಆರು ಮಹಡಿಯ ಕಟ್ಟಡವನ್ನು ನಿರ್ಮಿಸುವುದು ಆದರ್ಶ್‌ ಹೌಸಿಂಗ್‌ ಸೊಸೈಟಿಯ ಮೂಲ ಉದ್ದೇಶವಾಗಿತ್ತು.

ನಿಯಮ ಉಲ್ಲಂಘಿಸಿ 31 ಅಂತಸ್ತಿನ ಕಟ್ಟಡ ನಿರ್ಮಿಸಲಾಯಿತು. ಹಲವು ರಾಜಕಾರಣಿಗಳು ಮತ್ತು ಸೇನಾ ಅಧಿಕಾರಿಗಳು ಹಗರಣದಲ್ಲಿ ಭಾಗಿಯಾದ ಆರೋಪ ಕೇಳಿಬಂದಿತ್ತು. ಅವರೆಲ್ಲರೂ ತಮ್ಮ ಸಂಬಂಧಿಕರಿಗೆ ಕಡಿಮೆ ಹಣಕ್ಕೆ ಫ್ಲ್ಯಾಟ್‌ ದೊರಕಿಸಿಕೊಟ್ಟಿದ್ದರು

4 ಮಾಜಿ ಸಿ.ಎಂಗಳು ಆರೋಪಿಗಳು
ಅಶೋಕ್‌ ಚವಾಣ್‌  * ವಿಲಾಸ್‌ರಾವ್‌ ದೇಶಮುಖ್‌, ಸುಶೀಲ್‌ ಕುಮಾರ್‌ ಶಿಂಧೆ  * ಎಸ್‌.ಎನ್‌. ಪಾಟೀಲ್‌

* 2010ರ ನವೆಂಬರ್‌ನಲ್ಲಿ ಹಗರಣ ಬಯಲು, ತನಿಖೆ ಸಿಬಿಐಗೆ

*ಹಗರಣದಲ್ಲಿ ಭಾಗಿಯಾದ ಆರೋಪ: ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್‌ ಚವಾಣ್‌ ರಾಜೀನಾಮೆ
*2011ರಲ್ಲಿ ನ್ಯಾಯಾಂಗ ಆಯೋಗ ನೇಮಕ

*2011ರಲ್ಲಿ ಕಟ್ಟಡ ಕೆಡವಲು ಕೇಂದ್ರ ಪರಿಸರ ಸಚಿವಾಲಯ ಆದೇಶ

ADVERTISEMENT

*ಅದನ್ನು ಪ್ರಶ್ನಿಸಿ ಆದರ್ಶ್‌ ಸೊಸೈಟಿಯಿಂದ ಹೈಕೋರ್ಟ್‌ಗೆ ಅರ್ಜಿ
*ಪರಿಸರ ಸಚಿವಾಲಯದ ಆದೇಶದ ಜಾರಿ ಕೋರಿ ರಕ್ಷಣಾ ಇಲಾಖೆಯಿಂದಲೂ ಬಾಂಬೆ ಹೈಕೋರ್ಟ್‌ಗೆ ಅರ್ಜಿ 
*ಕರಾವಳಿ ನಿಯಂತ್ರಣ ವಲಯ ನಿಯಮ ಉಲ್ಲಂಘಿಸಿ ಈ ಕಟ್ಟಡವನ್ನು ಕಟ್ಟಲಾಗಿದೆ ಎಂಬುದು ಪರಿಸರ ಸಚಿವಾಲಯದ ವಾದ.
*ನಿವೃತ್ತ ಸೇನಾಧಿಕಾರಿಗಳು ಸೇರಿ ಸಿಬಿಐಯಿಂದ 2012ರಲ್ಲಿ ಎಂಟು ಮಂದಿ ಬಂಧನ, ಜಾಮೀನಿನಲ್ಲಿ ಬಿಡುಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.