ADVERTISEMENT

ಆಫ್ರಿಕನ್ನರ ಮೇಲೆ ಹಲ್ಲೆ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 28 ಮೇ 2016, 19:30 IST
Last Updated 28 ಮೇ 2016, 19:30 IST

ನವದೆಹಲಿ (ಪಿಟಿಐ): ಕಾಂಗೊ ದೇಶದ ಪ್ರಜೆಯ ಹತ್ಯೆ ಘಟನೆಗೆ ಆಫ್ರಿಕಾ ದೇಶಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ,  ದಕ್ಷಿಣ ದೆಹಲಿಯಲ್ಲಿ ಆಫ್ರಿಕಾದ ಯುವಕರ ಮೇಲೆ ನಾಲ್ಕು ದೌರ್ಜನ್ಯ  ಪ್ರಕರಣಗಳು  ದಾಖಲಾಗಿವೆ.

ಮೆಹ್ರೌಲಿ ಪ್ರದೇಶದಲ್ಲಿ ಗುರುವಾರ 9.30ರಿಂದ 11.30ಗಂಟೆಯೊಳಗೆ ಈ  ನಾಲ್ಕು ಘಟನೆಗಳು ನಡೆದಿವೆ. ಈ ಎಲ್ಲಾ ಪ್ರಕರಣಗಳು 30 ವರ್ಷದೊಳಗಿನವರ ಯುವಕರ ಮೇಲೆ ದೌರ್ಜನ್ಯ ನಡೆದಿದೆ. ಇವರು ಕೆಲ ವರ್ಷಗಳಿಂದ ದೆಹಲಿಯಲ್ಲೇ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ಪ್ರಕರಣಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದ್ದು, ಒಬ್ಬರು ಉಗಾಂಡ ಹಾಗೂ ಮತ್ತೊಬ್ಬರು ದಕ್ಷಿಣ ಆಫ್ರಿಕಾದವರಾಗಿದ್ದಾರೆ.  ಇನ್ನಿಬ್ಬರು ನೈಜೀರಿಯಾ ಪ್ರಜೆಗಳಾಗಿದ್ದಾರೆ.

ನೈಜೀರಿಯಾದ ಇಬ್ಬರು ಪ್ರಜೆಗಳು ಸ್ಥಳೀಯರ ಜತೆ ಜಗಳವಾಡಿದಾಗ ದೌರ್ಜನ್ಯ ನಡೆದಿದೆ ಎನ್ನಲಾಗಿದ್ದು, ಉಳಿದ ಪ್ರಕರಣಗಳ ಕಾರಣ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.