ADVERTISEMENT

ಇಂಟರ್‌ನೆಟ್‌ ವೇಗ ಪರಿಶೀಲನೆಗೆ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 1 ಜುಲೈ 2016, 19:30 IST
Last Updated 1 ಜುಲೈ 2016, 19:30 IST

ನವದೆಹಲಿ (ಪಿಟಿಐ): ಮೊಬೈಲ್‌ ಸೇವಾ ಕಂಪೆನಿಗಳು ನೀಡುವ ಇಂಟರ್‌ನೆಟ್‌ ಸಂಪರ್ಕದ ವೇಗ ಎಷ್ಟು ಎಂಬುದನ್ನು ಪರಿಶೀಲಿಸಲು ಆ್ಯುಪ್‌ ಬಿಡುಗಡೆ ಮಾಡುವುದಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೇಳಿದೆ.

ಇಂಟರ್‌ನೆಟ್‌ ಸಂಪರ್ಕದ ವೇಗ ಎಷ್ಟು ಎಂಬ ಮಾಹಿತಿಯನ್ನು ಬಳಕೆದಾರರು ಈ ಆ್ಯಪ್‌ ಬಳಸಿ ಟ್ರಾಯ್‌ಗೆ ರವಾನಿಸಬಹುದು. ಆ್ಯಪ್‌ ಬಳಕೆಯನ್ನು ಜುಲೈ 5ರಿಂದ ಆರಂಭಿಸಬಹುದು ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಕಂಪೆನಿಗಳು ಹೇಳುವಷ್ಟು ವೇಗದ ಇಂಟರ್‌ನೆಟ್‌ ಸಂಪರ್ಕ ಸಿಗುವುದಿಲ್ಲ ಎಂದು ಸಾಕಷ್ಟು ಗ್ರಾಹಕರು ದೂರುತ್ತಿದ್ದಾರೆ. ಅಲ್ಲದೆ, ಟ್ರಾಯ್‌ ನಡೆಸಿದ ಸಮೀಕ್ಷೆಯಲ್ಲಿ ಕೆಲವು ನಗರಗಳಲ್ಲಿ 3–ಜಿ ಇಂಟರ್‌ನೆಟ್‌ ಸಂಪರ್ಕ ಹೊಂದಿರುವವರಿಗೆ 2–ಜಿ ವೇಗದ ಸಂಪರ್ಕ ಲಭಿಸುತ್ತಿದೆ ಎಂಬುದು ಗೊತ್ತಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.