ADVERTISEMENT

ಇಟಲಿ ನಾವಿಕರ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2014, 19:30 IST
Last Updated 16 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ): ಅನಾರೋಗ್ಯದ ಕಾರಣ ಇನ್ನೂ ಕೆಲವು ದಿನ ಇಟಲಿಯಲ್ಲೇ ಇರಲು ಅನುಮತಿ ನೀಡಬೇಕು ಎಂಬ ಇಟಲಿಯ ನಾವಿಕ ಮಸ್ಸಿಮಿಲಾನೊ ಲಟ್ಟೊರೆ ಅವರ ಕೋರಿಕೆಯನ್ನು ಸುಪ್ರೀಂಕೋರ್ಟ್‌ ತಳ್ಳಿಹಾಕಿದೆ.

ಅದೇ ರೀತಿ ಕ್ರಿಸ್‌ಮಸ್‌ಗೆ ಇಟಲಿಗೆ ತೆರಳಲು ಅನುಮತಿ ನೀಡಬೇಕು ಎಂಬ ಇನ್ನೊಬ್ಬ  ನಾವಿಕನ ಕೋರಿಕೆಯನ್ನೂ ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ಇಬ್ಬರು ನಾವಿಕರು ಕೇರಳದ ಮೀನುಗಾರರ ಹತ್ಯೆ ಆಪಾದನೆಯನ್ನು ಎದುರಿಸುತ್ತಿದ್ದಾರೆ.

ಪ್ರಕರಣ ನಡೆದು ಇಷ್ಟು ವರ್ಷಗಳಾದರೂ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿಲ್ಲ ಮತ್ತು ವಿಚಾರಣೆ ಆರಂಭವಾಗಿಲ್ಲ. ಇಂತಹುದು ಜಗತ್ತಿನಲ್ಲಿ ಎಲ್ಲಿಯೂ ನಡೆಯುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರನ್ನು ಒಳಗೊಂಡ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.