ADVERTISEMENT

ಇದು 'ಉತ್ತಮ ಬಜೆಟ್' ಎಂದ ಪ್ರಧಾನಿ ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2017, 10:44 IST
Last Updated 1 ಫೆಬ್ರುವರಿ 2017, 10:44 IST
ಇದು 'ಉತ್ತಮ ಬಜೆಟ್' ಎಂದ ಪ್ರಧಾನಿ ನರೇಂದ್ರ ಮೋದಿ
ಇದು 'ಉತ್ತಮ ಬಜೆಟ್' ಎಂದ ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಇಂದು ಲೋಕಸಭೆಯಲ್ಲಿ ಮಂಡನೆ ಮಾಡಿದ ಕೇಂದ್ರ ಬಜೆಟ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಇದೊಂದು ಉತ್ತಮ ಬಜೆಟ್ ಎಂದು  ಪ್ರತಿಕ್ರಿಯಿಸಿದ ಮೋದಿ, ಗ್ರಾಮೀಣರ, ಬಡವರ ಮತ್ತು ರೈತ ಸ್ನೇಹಿ ಬಜೆಟ್ ಇದಾಗಿದೆ ಎಂದಿದ್ದಾರೆ.

ಪ್ರಸಕ್ತ ಸಾಲಿನ ಬಜೆಟ್‍ನ್ನು ಶ್ಲಾಘಿಸಿದ ಮೋದಿ, ಈ ಬಜೆಟ್‍ ದೇಶದಲ್ಲಿ  ಹಲವಾರು ಬದಲಾವಣೆಗಳಿಗೆ ನಾಂದಿ ಹಾಡಲಿದೆ ಎಂದು ಹೇಳಿದ್ದಾರೆ.

ADVERTISEMENT

ಮೋದಿ ಮಾತು
* ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ನಿರ್ಮೂಲನೆ ಮಾಡುವುದಕ್ಕೆ ಬದ್ಧವಾಗಿರುವ ನಿರ್ಧಾರ ಈ ಬಜೆಟ್‍ನಲ್ಲಿ ಕಾಣುತ್ತಿದೆ.

* ಭವನ ನಿರ್ಮಾಣ ವಲಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ

* ರೈಲ್ವೇ ಸುರಕ್ಷಾ ನಿಧಿ ಬಗ್ಗೆ ರೈಲ್ವೇ ಬಜೆಟ್‍ನಲ್ಲಿ ಆದ್ಯತೆ ನೀಡಲಾಗಿದೆ

* ಗ್ರಾಮೀಣ ಜನರ, ಬಡವರ ಮತ್ತು ರೈತರ ಏಳಿಗಾಗಿ ಬಜೆಟ್‍ನಲ್ಲಿ ಯೋಜನೆ ರೂಪಿಸಲಾಗಿದೆ

* ಬಜೆಟ್‍ನಲ್ಲಿ ರೈತರಿಗೆ,  ಗ್ರಾಮೀಣರಿಗೆ, ಬಡವರಿಗೆ, ದಲಿತರಿಗೆ, ಶೋಷಿತರ ಅಭಿವೃದ್ಧಿಗಾಗಿ ಹೆಚ್ಚು ಒತ್ತು ನೀಡಲಾಗಿದೆ

* ರೈತರ ಆದಾಯವನ್ನು ದುಪಟ್ಟು ಮಾಡುವುದೇ ಸರ್ಕಾರದ ಗುರಿ

* ರೈಲ್ವೇ ಬಜೆಟ್‍ನ್ನು ಈ ಬಜೆಟ್‍ ಜತೆ ವಿಲೀನ ಮಾಡಿರುವುದರಿಂದ ಸಾರಿಗೆ ಸಂಪರ್ಕ ವಲಯದಲ್ಲಿ ಗಣನೀಯ ಬೆಳವಣಿಗೆಯಾಗಲಿದೆ

* ಈ ಬಜೆಟ್ ಸಣ್ಣ ಉದ್ದಿಮೆಗಳಿಗೆ ಜಾಗತಿಕ ವಲಯದಲ್ಲಿ ಪೈಪೋಟಿ ಮಾಡುವ ಕ್ಷಮತೆ ನೀಡಲು ಸಹಾಯ ಮಾಡಲಿದೆ

* ದೇಶದ ಅಭಿವೃದ್ಧಿಗೆ ಈ ಬಜೆಟ್ ಸಹಕಾರಿಯಾಗಿದೆ

* ಕಳೆದ  ಎರಡೂ ವರ್ಷಗಳಿಂದ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಮಂದೆ ಫಲ ನೀಡಲಿದೆ

* ಇದು ಉತ್ತಮ ಬಜೆಟ್ ಆಗಿದ್ದು ಬಡವರ ಕೈಗೆ ಹೆಚ್ಚಿನ ಶಕ್ತಿ ನೀಡಲಿದೆ

* ಎಲ್ಲರ ಕನಸನ್ನು ಸಾಕಾರಗೊಳಿಸುವ ನಡೆ ಈ ಬಜೆಟ್‍ನಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.