ADVERTISEMENT

ಇರಾಕ್‌ನಲ್ಲಿ ಸಿಲುಕಿರುವವರ ಬಿಡುಗಡೆಗೆ ನೆರವು

​ಪ್ರಜಾವಾಣಿ ವಾರ್ತೆ
Published 21 ಜೂನ್ 2014, 19:30 IST
Last Updated 21 ಜೂನ್ 2014, 19:30 IST

ಚಂಡೀಗಡ (ಪಿಟಿಐ): ಹಿಂಸಾ­ಪೀಡಿತ ಇರಾಕ್‌ನಲ್ಲಿ ಸಿಲುಕಿ­ರುವ ಪಂಜಾಬಿನ 200 ಜನ­ರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರಲು ತಗಲುವ ವೆಚ್ಚ ಭರಿಸಲು ಪಂಜಾಬ್ ಸರ್ಕಾರ ನಿರ್ಧರಿಸಿದೆ.

ಸಂಕಷ್ಟದಲ್ಲಿರುವ ಕುಟುಂಬ­ಗಳು ಇರಾಕ್‌ ದೇಶಕ್ಕೆ ಮಾಡಿ­ರುವ ದೂರ­ವಾಣಿ ಕರೆಗಳ ವೆಚ್ಚವನ್ನು ಸರ್ಕಾರ­ದಿಂದ  ಭರಿ­ಸಲು ಮುಖ್ಯ­ಮಂತ್ರಿ ಪ್ರಕಾಶ್‌­ಸಿಂಗ್ ಬಾದಲ್‌ ನಿರ್ಧರಿಸಿ­ದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಉಗ್ರರ ಬಳಿ ಒತ್ತೆಯಾಳು­ಗಳಾ­ಗಿರುವ ಪಂಜಾಬಿ­ಗಳನ್ನು ಸುರಕ್ಷಿತವಾಗಿ ವಾಪಸ್‌ ಕರೆ­ತರುವ ಬಗ್ಗೆ ಹಾಗೂ ಇದಕ್ಕೆ ತಗಲುವ ವೆಚ್ಚ ಭರಿಸುವ ಕುರಿತು ಪ್ರಕಾಶ್‌ಸಿಂಗ್ ಬಾದಲ್ ಅವರು ವಿದೇಶಾಂಗ ವ್ಯವ­ಹಾರ­ಗಳ  ಸಚಿವಾ­ಲಯದ ಜತೆ ಮಾತು­ಕತೆ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.ಇರಾಕ್‌ನಲ್ಲಿ ಇರುವ  ಭಾರತೀಯರ ಸುರಕ್ಷತೆ ಕುರಿತು ಕೇಂದ್ರ ಸರ್ಕಾರ ಕೈ­ಗೊಂಡಿರುವ ಕ್ರಮದ ಬಗ್ಗೆ ಬಾದಲ್‌ ತೃಪ್ತಿ ವ್ಯಕ್ತ­ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.