ADVERTISEMENT

ಇರಾಕ್: ಭಾರತೀಯ ದಾದಿಯರ ಬಿಡುಗಡೆ, ಶನಿವಾರ ಕೇರಳಕ್ಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2014, 12:58 IST
Last Updated 4 ಜುಲೈ 2014, 12:58 IST

ತಿರುವಂತಪುರ (ಐಎಎನ್ಎಸ್): ಸುನ್ನಿ ಬಂಡುಕೋರರು ವಶಪಡಿಸಿಕೊಂಡಿದ್ದ ಭಾರತದ ಎಲ್ಲಾ 46 ಮಂದಿ ದಾದಿಯರನ್ನು ಶುಕ್ರವಾರ ಬಿಡುಗಡೆಗೊಳಿಸಲಾಗಿದ್ದು ಶನಿವಾರ ಬೆಳಗ್ಗೆ ಅವರೆಲ್ಲರೂ ವಿಮಾನದ ಮೂಲಕ ಕೇರಳಕ್ಕೆ ಬರಲಿದ್ದಾರೆ ಎಂದು ಮುಖ್ಯಮಂತ್ರಿ ಒಮ್ಮನ್ ಚಾಂಡಿ ಶುಕ್ರವಾರ ಪ್ರಕಟಿಸಿದರು.

ನವದೆಹಲಿಯಿಂದ ದೂರವಾಣಿ ಸಂದರ್ಶನ ನೀಡಿದ ಮುಖ್ಯಮಂತ್ರಿ, ಶನಿವಾರ ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ ಬರಲಿರುವ ದಾದಿಯರನ್ನು ಸ್ವಾಗತಿಸಲು ತಾವು ಕೋಚಿ ತಲುಪಲಿರುವುದಾಗಿ ಹೇಳಿದರು.

ಕೇರಳದಿಂದ ಇರಾಕ್ ಗೆ ತೆರಳಿದ್ದ ಈ ಎಲ್ಲಾ ದಾದಿಯರೂ ಸುರಕ್ಷಿತರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಗುರುವಾರ ಸಂಜೆ ಟಿಕ್ರಿತ್ ನಿಂದ ಕುರ್ಡಿಸ್ತಾನದ ರಾಜದಾನಿ ಎರ್ಬಿಲ್ಗೆ ಒಯ್ಯಲಾಗಿದ್ದ ದಾದಿಯರನ್ನು ಬಸ್ಸಿನಲ್ಲಿ ಮೋಸುಲ್ ಗೆ ಕರೆದೊಯ್ಯಲಾಗುತ್ತಿದೆ ಎಂದು ಚಾಂಡಿ ಐಎಎನ್ ಎಸ್ ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.