ADVERTISEMENT

ಉತ್ತಮ ದಿನಗಳು ಬರುತ್ತಿವೆ: ಪಾಕ್‌

​ಪ್ರಜಾವಾಣಿ ವಾರ್ತೆ
Published 17 ಜೂನ್ 2014, 14:43 IST
Last Updated 17 ಜೂನ್ 2014, 14:43 IST

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರ ನುಡಿಗಟ್ಟನ್ನು ಬಳಸಿಕೊಂಡಿರುವ ಪಾಕಿಸ್ತಾನ,  ಭಾರತದ ಜೊತೆಗಿನ ದ್ವಿಪಕ್ಷೀಯ ಬಾಂಧ್ಯವಕ್ಕೆ ‘ಉತ್ತಮ ದಿನಗಳು ಬರುತ್ತಿವೆ’ ಎಂದು ಬಣ್ಣಿಸಿದೆ. ಅಲ್ಲದೇ ಉಭಯ ರಾಷ್ಟ್ರಗಳ ನುಡುವಣ ಮಾತುಕತೆ ಸುಧಾರಿಸಿದ ಬಳಿಕ ಭಾರತಕ್ಕೆ ತಾರತಮ್ಯ ರಹಿತ ಮಾರುಕಟ್ಟೆ ಪ್ರವೇಶ ನೀಡುವ ಪ್ರಕ್ರಿಯೆ ಚಾಲನೆ ಪಡೆಯಲಿದೆ ಎಂದು ಮಂಗಳವಾರ ಭರವಸೆ ನೀಡಿದೆ.

‘ನಮ್ಮ ಉಭಯ ಪ್ರಧಾನಿಗಳು ಪರಸ್ಪರ ಭೇಟಿಯಾಗಿ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ದ್ವಿಪಕ್ಷೀಯ ಸಂಬಂಧಗಳು ಸುಧಾರಿಸಲಿ. ಸೂಕ್ತ ಸಮಯದಲ್ಲಿ ಈ ವಿಷಯ ಪ್ರಸ್ತಾಪವಾಗುವ ಭರವಸೆ ಇದೆ’ ಎಂದು ಭಾರತದಲ್ಲಿರುವ ಪಾಕ್‌ ಹೈಕಮಿಷನರ್‌ ಅಬ್ದುಲ್‌ ಬಸಿತ್‌ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಭಾರತಕ್ಕೆ ಪರಮಾಪ್ತ ರಾಷ್ಟ್ರದ ಸ್ಥಾನಮಾನ (ಎಂಎಫ್‌ಎನ್‌) ಅಥವಾ ತಾರತಮ್ಯ ರಹಿತ ಮಾರುಕಟ್ಟೆ  ಪ್ರವೇಶಕ್ಕೆ (ಎನ್‌ಡಿಎಂಎ) ಹಸಿರು ನಿಶಾನೆ ತೋರುವ ಸಂಬಂಧಿತ ಪ್ರಶ್ನೆಗೆ ಬಸಿತ್‌ ಅವರು ಮೇಲಿನಂತೆ ಉತ್ತರಿಸಿದ್ದಾರೆ.

ADVERTISEMENT

ಪಾಕಿಸ್ತಾನದ ಜೀವನ ಶೈಲಿ ಪ್ರದರ್ಶಿಸುವ ಎರಡನೇ ‘ಆಲಿಶಾನ್‌ ಪಾಕಿಸ್ತಾನ’ ಕಾರ್ಯಕ್ರಮದ ಮುನ್ನೋಟ ಸಮಾರಂಭದಲ್ಲಿ ಮಾತನಾಡಿದ ಅವರು, ಉಭಯ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧ ರೂಪಿಸಲು ತಮ್ಮ–ತಮ್ಮ ನಾಯಕರಿಗೆ ಎರಡೂ ದೇಶಗಳ ಜನತೆ ಬೃಹತ್‌ ಬಹುಮತ ನೀಡಿವೆ ಎಂದರು.

‘ಒಳ್ಳೆಯ ದಿನಗಳು ಬರುತ್ತಿವೆಯೇ ಎಂದು ಸಂದೇಹ ಪಡಲು ಯಾವುದೇ ಕಾರಣಗಳಿಲ್ಲ’ ಎಂದರು.

ಸಾರ್ವತ್ರಿಕ ಚುನಾವಣಾ ಪ್ರಚಾರದ ವೇಳೆ ಮೋದಿ ಅವರು ‘ಉತ್ತಮ ದಿನಗಳು ಬರಲಿವೆ’ ಎಂಬುದನ್ನು ಘೋಷ್ಯ ವಾಕ್ಯದಂತೆ ಬಳಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.