ADVERTISEMENT

ಉಪಚುನಾವಣೆ ಶಾಂತಿಯುತ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2014, 19:30 IST
Last Updated 13 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): ಹತ್ತು ರಾಜ್ಯಗಳಲ್ಲಿ 33 ವಿಧಾನಸಭಾ ಮತ್ತು ಮೂರು ಲೋಕಸಭಾ ಕ್ಷೇತ್ರಗಳಿಗೆ ಶನಿವಾರ ನಡೆದ ಉಪಚುನಾವಣೆ­ಯಲ್ಲಿ ಸಾಧಾರಣದಿಂದ ಹೆಚ್ಚು ಮತದಾನ ನಡೆದ ವರದಿ ಆಗಿದೆ. ವಡೋದರಾ (ಗುಜರಾತ್) ಮೈನ್ಪುರಿ (ಉತ್ತರ ಪ್ರದೇಶ) ಮತ್ತು ಮೆದಕ್‌ (ತೆಲಂಗಾಣ) ಲೋಕಸಭಾ ಕ್ಷೇತ್ರಗಳಲ್ಲಿ  ಕ್ರಮವಾಗಿ ಶೇ 49, 56 ಮತ್ತು 67ರಷ್ಟು ಮತದಾನ ಆಗಿದೆ.

ವಿಧಾನಸಭಾ ಕ್ಷೇತ್ರಗಳ ಮತದಾನದ ವಿವರ: ಉತ್ತರ ಪ್ರದೇಶ (11) ಶೇ 53, ಗುಜರಾತ್ (9) ಶೇ 49, ರಾಜಸ್ತಾನ (4) ಶೇ 66, ಅಸ್ಸಾಂ (3) ಶೇ 70, ಛತ್ತೀಸಗಡದ (1) ಶೇ 50, ತ್ರಿಪುರಾ (1) ಶೇ 87, ಆಂಧ್ರಪ್ರದೇಶದ (1)  ಶೇ 68, ಪಶ್ಚಿಮ ಬಂಗಾಳದ ಬಸಿರಹತ್‌ ದಕ್ಷಿಣ ಮತ್ತು ಚೌರಿಂಗಿ ಕ್ಷೇತ್ರಗಳಲ್ಲಿ ಕ್ರಮವಾಗಿ ಶೇ 79.59  ಹಾಗೂ ಶೇ 47.13.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.