ADVERTISEMENT

ಎಎಪಿ ಉನ್ನತ ಸಮಿತಿಗೆ ರಾಜೀನಾಮೆ

ಯಾದವ್‌, ಜೈಹಿಂದ್ ಮಧ್ಯೆ ಜಗಳ

​ಪ್ರಜಾವಾಣಿ ವಾರ್ತೆ
Published 31 ಮೇ 2014, 19:30 IST
Last Updated 31 ಮೇ 2014, 19:30 IST

ನವದೆಹಲಿ (ಪಿಟಿಐ): ಆಮ್‌ ಆದ್ಮಿ ಪಕ್ಷದ (ಎಪಿಪಿ) ಹಿರಿಯ ಮುಖಂಡ ಯೋಗೇಂದ್ರ ಯಾದವ್‌ ಮತ್ತು ಹರಿಯಾಣ ಘಟಕದ ಸಂಚಾಲಕ ನವೀನ್‌ ಜೈಹಿಂದ್‌ ಅವರು ಕ್ರಮವಾಗಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಮತ್ತು ರಾಷ್ಟ್ರೀಯ ಕಾರ್ಯಕಾರಿಣಿಗೆ  (ಎನ್‌ಇ) ರಾಜೀನಾಮೆ ನೀಡಿದ್ದಾರೆ.ಇವರಿಬ್ಬರ ಮಧ್ಯೆ ಜಗಳವೇ ಇದಕ್ಕೆ ಕಾರಣ ಎನ್ನಲಾಗಿದೆ.

ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ ಎಂದು ಇಬ್ಬರು ಮುಖಂಡರೂ ಸ್ಪಷ್ಟ ಪಡಿಸಿದ್ದಾರೆ.ಯಾದವ್‌ ಮತ್ತು ಜೈಹಿಂದ್‌ ಅವರು ಪಕ್ಷದ ಉನ್ನತ ಸಮಿತಿಗಳಿಗೆ  ರಾಜೀನಾಮೆ ನೀಡಿದ್ದಾರೆಯೇ ಹೊರತು, ಪಕ್ಷವನ್ನು ತ್ಯಜಿಸಿಲ್ಲ ಎಂದು ಎಪಿಪಿ ವಕ್ತಾರ ದಿಲೀಪ್‌ ಪಾಂಡೆ ಖಚಿತ ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.