ADVERTISEMENT

ಎಬಿವಿಪಿ ಖಾತೆ ಅಮಾನತು ಹಿಂಪಡೆದ ಟ್ವಿಟರ್

ಪಿಟಿಐ
Published 24 ಮಾರ್ಚ್ 2017, 20:41 IST
Last Updated 24 ಮಾರ್ಚ್ 2017, 20:41 IST

ನವದೆಹಲಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಖಾತೆಗಳನ್ನು ಅಮಾನತು ಮಾಡಿದ್ದ ಟ್ವಿಟರ್‌ ಸಂಸ್ಥೆ, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾದ ನಂತರ ಅಮಾನತನ್ನು ಹಿಂಪಡೆದಿದೆ.

ಎಬಿವಿಪಿಯ ಅಧಿಕೃತ ಟ್ವಿಟರ್ ಖಾತೆ @ABVPVoice, ದೆಹಲಿ ರಾಜ್ಯ ಘಟಕದ ಖಾತೆ @ABVPDelhi ಮತ್ತು ಸಂಘಟನೆಯ ರಾಷ್ಟ್ರೀಯ ಕಚೇರಿ ಕಾರ್ಯದರ್ಶಿ ರಾಹುಲ್ ಶರ್ಮ ಹಾಗೂ ರಾಷ್ಟ್ರೀಯ ಮಾಧ್ಯಮ ಸಂಚಾಲಕ ಸಾಕೇತ್ ಬಹುಗುಣ ಅವರ ಖಾತೆಗಳನ್ನು ಗುರುವಾರ ಸಂಜೆ ಅಮಾನತು ಮಾಡಲಾಗಿತ್ತು ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರೆ ತಿಳಿಸಿದ್ದಾರೆ.­

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.