ADVERTISEMENT

ಏಕಕಾಲಕ್ಕೆ103 ಉಪಗ್ರಹಗಳ ಉಡಾವಣೆಗೆ ಸಿದ್ಧತೆ: ದಾಖಲೆ ಸೃಷ್ಟಿಸಲಿದೆ ಇಸ್ರೋ

ಪಿಟಿಐ
Published 4 ಜನವರಿ 2017, 14:46 IST
Last Updated 4 ಜನವರಿ 2017, 14:46 IST
ಏಕಕಾಲಕ್ಕೆ103 ಉಪಗ್ರಹಗಳ ಉಡಾವಣೆಗೆ ಸಿದ್ಧತೆ: ದಾಖಲೆ ಸೃಷ್ಟಿಸಲಿದೆ ಇಸ್ರೋ
ಏಕಕಾಲಕ್ಕೆ103 ಉಪಗ್ರಹಗಳ ಉಡಾವಣೆಗೆ ಸಿದ್ಧತೆ: ದಾಖಲೆ ಸೃಷ್ಟಿಸಲಿದೆ ಇಸ್ರೋ   

ತಿರುಪತಿ: ಒಂದೇ ರಾಕೆಟ್‌ ಮೂಲಕ 103 ಉಪಗ್ರಹಗಳನ್ನು ಉಡಾವಣೆ ಮಾಡಲು ಇಸ್ರೋ ಸಜ್ಜುಗೊಂಡಿದ್ದು, ಫೆಬ್ರವರಿ ಮೊದಲ ವಾರದಲ್ಲಿ ಹೊಸದೊಂದು ದಾಖಲೆ ಸೃಷ್ಟಿಯಾಗಲಿದೆ.

ಈವರೆಗೂ ಜಗತ್ತಿನ ಯಾವುದೇ ಬಾಹ್ಯಾಕಾಶ ಸಂಸ್ಥೆ ಮಾಡಿರದ ಪ್ರಯತ್ನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮುಂದಾಗಿದೆ. ಏಕಕಾಲದಲ್ಲಿ ಒಂದೇ ರಾಕೆಟ್‌ ಮೂಲಕ ಒಟ್ಟು 103 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಬೃಹತ್‌ ಯೋಜನೆ ಕೊನೆಯ ಹಂತದಲ್ಲಿದೆ.

ಅಮೆರಿಕ, ಜರ್ಮನಿ ಸೇರಿದಂತೆ ವಿದೇಶದ 100 ಉಪಗ್ರಹಗಳು ಒಂದೇ ಬಾರಿಗೆ ಉಡಾವಣೆಯಾಗೊಳ್ಳಲಿವೆ ಎಂದು ಇಸ್ರೋ ಲಿಕ್ವಿಡ್‌ ಪ್ರೊಪಲ್ಷನ್‌ ಸಿಸ್ಟಮ್ಸ್‌ ಕೇಂದ್ರದ ನಿರ್ದೇಶಕ ಎಸ್‌.ಸೋಮನಾಥ್‌ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ತಿಳಿಸಿದರು.

ADVERTISEMENT

ಪಿಎಸ್‌ಎಲ್‌ವಿ–ಸಿ37 ಉಡಾವಣ ವಾಹಕ 500–600 ಕೆ.ಜಿ. ತೂಕದ ಉಪಗ್ರಹಗಳನ್ನು ಹೊತ್ತೊಯ್ಯಲಿದೆ. ಈ ಮೂಲಕ ಇಸ್ರೋ ಹೊಸ ಮೈಲಿಗಲ್ಲು ತಲುಪಲಿದೆ.

2014ರಲ್ಲಿ ರಷ್ಯಾ ಒಟ್ಟಿಗೆ 37 ಉಪಗ್ರಹಗಳನ್ನು ಹಾಗೂ ನಾಸಾ 29 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿರುವುದು ಈವರೆಗಿನ ದಾಖಲೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.