ADVERTISEMENT

ಐಡಿಬಿಐಗೆ ₹600 ಕೋಟಿ ಸಾಲ ವಂಚನೆ

ಪಿಟಿಐ
Published 26 ಏಪ್ರಿಲ್ 2018, 19:33 IST
Last Updated 26 ಏಪ್ರಿಲ್ 2018, 19:33 IST
ಐಡಿಬಿಐಗೆ ₹600 ಕೋಟಿ ಸಾಲ ವಂಚನೆ
ಐಡಿಬಿಐಗೆ ₹600 ಕೋಟಿ ಸಾಲ ವಂಚನೆ   

ನವದೆಹಲಿ (ಪಿಟಿಐ): ಬ್ಯಾಂಕ್‌ಗೆ ಭಾರಿ ಮೊತ್ತದ ವಂಚನೆ ಮಾಡಿದ ಮತ್ತೊಂದು ಪ್ರಕರಣ ಬಯಲಾಗಿದೆ. ಐಡಿಬಿಐನಿಂದ ನಿಯಮ ಮೀರಿ ₹600 ಕೋಟಿ ಸಾಲ ನೀಡಿದ ಪ್ರಕರಣದ ಸಂಬಂಧ ಸಿಬಿಐ, 38 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಆರೋಪಿಗಳಲ್ಲಿ 15 ಮಂದಿ ಬ್ಯಾಂಕ್‌ನ ಅಧಿಕಾರಿಗಳಾಗಿದ್ದು ಸಿಂಡಿಕೇಟ್‌ ಬ್ಯಾಂಕ್‌ನ ಮುಖ್ಯಸ್ಥ ಮೆಲ್ವಿನ್‌ ರೇಗೊ ಸೇರಿದ್ದಾರೆ.  

2010ರಿಂದ 2014ರ ಅವಧಿಯಲ್ಲಿ ಈ ಸಾಲ ನೀಡಲಾಗಿದೆ. ಈ ಹಗರಣವನ್ನು ಪತ್ತೆ ಹಚ್ಚಿದ್ದ ಕೇಂದ್ರ ಜಾಗೃತ ಆಯೋಗ, ಸಿಬಿಐಗೆ ದೂರು ನೀಡಿತ್ತು.

ಏರ್ಸೆಲ್‌ ಮ್ಯಾಕ್ಸಿಸ್‌ ಕಂಪನಿಯ ಪ್ರವರ್ತಕ ಶಿವಶಂಕರನ್‌ ಅವರ ಮಗನ ಕಂಪನಿಗಳಿಗೆ ಈ ಸಾಲ ನೀಡಲಾಗಿದೆ. ಸಾಲ ನೀಡಿಕೆ ಸಂದರ್ಭದಲ್ಲಿ ರೇಗೊ ಅವರು ಐಡಿಬಿಐನ ಉಪ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಇಂಡಿಯನ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಕಿಶೋರ್‌ ಕರಾತ್‌ (ಇವರು ಐಡಿಬಿಐನ ವ್ವವಸ್ಥಾಪಕ ನಿರ್ದೇಶಕರಾಗಿದ್ದರು) ಮತ್ತು ಐಡಿಬಿಐನ ಅಧ್ಯಕ್ಷರಾಗಿದ್ದ ಎಂ.ಎಸ್‌. ರಾಘವನ್‌ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.