ADVERTISEMENT

ಕಠುವಾ ಅತ್ಯಾಚಾರ ಖಂಡಿಸಿ ರಚಿಸಿದ ಕಲಾಕೃತಿ: ದುರ್ಗಾ ಮಾಲತಿ ಮನೆ ಮೇಲೆ ಕಲ್ಲು ತೂರಾಟ

ಏಜೆನ್ಸೀಸ್
Published 20 ಏಪ್ರಿಲ್ 2018, 11:44 IST
Last Updated 20 ಏಪ್ರಿಲ್ 2018, 11:44 IST
ಕಠುವಾ ಅತ್ಯಾಚಾರ ಖಂಡಿಸಿ ರಚಿಸಿದ ಕಲಾಕೃತಿ: ದುರ್ಗಾ ಮಾಲತಿ ಮನೆ ಮೇಲೆ ಕಲ್ಲು ತೂರಾಟ
ಕಠುವಾ ಅತ್ಯಾಚಾರ ಖಂಡಿಸಿ ರಚಿಸಿದ ಕಲಾಕೃತಿ: ದುರ್ಗಾ ಮಾಲತಿ ಮನೆ ಮೇಲೆ ಕಲ್ಲು ತೂರಾಟ

ಪಾಲಕ್ಕಾಡ್‌ (ಕೇರಳ): ಚಿತ್ರ ಕಲಾವಿದೆ ದುರ್ಗಾ ಮಾಲತಿ ಅವರು ರಚಿಸಿದ್ದ ಎರಡು ಕಲಾಕೃತಿಗಳು ವಿವಾದಕ್ಕಿಡಾಗಿದ್ದು ಅವರ ಮನೆಯ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಳೆದ ರಾತ್ರಿ ಕಲ್ಲು ತೂರಾಟ ನಡೆಸಿದ್ದಾರೆ.

ದುರ್ಗಾ ಮಾಲತಿ ಅವರ ಮನೆಯ ಕಿಟಕಿ ಗಾಜುಗಳು ಹೊಡೆದಿದ್ದು, ಮನೆಯ ಮುಂದೆ ನಿಲ್ಲಿಸಿದ್ದ ಜೀಪ್‌ ಕೂಡ ಜಖಂಗೊಂಡಿದೆ. ಹಾನಿಗೊಳಗಾಗಿರುವ ಕಿಟಕಿ ಹಾಗೂ ಜಖಂಗೊಂಡಿರುವ ಜೀಪಿನ ಚಿತ್ರಗಳನ್ನು ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ರೀತಿ ದಾಳಿ ಮಾಡಲು ದುರ್ಗಾ ಮಾಲತಿ ಏನು ತಪ್ಪು ಮಾಡಿದ್ದಾರೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಸ್ಥಳೀಯ ಪೊಲೀಸ್‌ ಠಾಣೆಗೆ ದುರ್ಗಾ ಮಾಲತಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ದುರ್ಗಾ ಮಾಲತಿ ಅವರ ಮನೆಗೆ ಭದ್ರತೆ ಕಲ್ಪಿಸಿದ್ದಾರೆ.

ADVERTISEMENT

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ದುರ್ಗಾ ಮಾಲತಿ ಪ್ರವೃತ್ತಿಯಲ್ಲಿ ಚಿತ್ರ ಕಲಾವಿದೆಯೂ ಹೌದು.

ಏನಿದು ವಿವಾದ: ಕಠುವಾದಲ್ಲಿ 8 ವರ್ಷದ ಬಾಲಕಿ ಮೇಲೆ ಒಂದು ವಾರ ನಿರಂತರವಾಗಿ ಅತ್ಯಾಚಾರ ಮಾಡಿ, ಹತ್ಯೆ ಮಾಡಿರುವುದನ್ನು  ಖಂಡಿಸಿ ದುರ್ಗಾ ಮಾಲತಿ ಎರಡು ಕಲಾಕೃತಿಗಳನ್ನು ರಚಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಎರಡು ಕಲಾಕೃತಿಗಳು ಪುರುಷರ ಗುಪ್ತಾಂಗವನ್ನು ಬಿಂಬಿಸುತ್ತವೆ. ಒಂದು ಕಲಾಕೃತಿಯಲ್ಲಿ, ತ್ರಿಶೂಲವೊಂದರಲ್ಲಿ ಪುರುಷನ ಜನನಾಂಗವನ್ನು ಚಿತ್ರಿಸಲಾಗಿದೆ. ಮತ್ತೊಂದು ಕಲಾಕೃತಿಯಲ್ಲಿ ಪುರುಷನ ಗುಪ್ತಾಂಗದ ಮೇಲೆ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಬಾಲಕಿಯ ಚಿತ್ರ ಹಾಗೂ ಪ್ರತಿಭಟನೆಯ ಬಾವುಟವನ್ನು ಚಿತ್ರಿಸಲಾಗಿದೆ.

ಈ ಎರಡು ಕಲಾಕೃತಿಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆವುಂಟು ಮಾಡಿವೆ ಎಂದು ಆರೋಪಿಸಿ ಕೆಲವರು ಪ್ರತಿಭಟನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.