ADVERTISEMENT

ಕದ್ದಾಲಿಕೆ ಉಪಕರಣ ಪತ್ತೆ ನಿರಾಧಾರ: ಗಡ್ಕರಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 8:31 IST
Last Updated 30 ಜುಲೈ 2014, 8:31 IST

ನವದೆಹಲಿ(ಪಿಟಿಐ): ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಿವಾಸದಲ್ಲಿ ಕದ್ದಾಲಿಕೆ ಉಪಕರಣ ಪತ್ತೆಯಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ಹುಸಿಯಾದ ಹಾಗೂ ನಿರಾಧಾರವಾದ ವರದಿ ಎಂದು ಗಡ್ಕರಿ ಅವರು ತಳ್ಳಿಹಾಕಿದ್ದಾರೆ.

ಮೊದಲು ದೆಹಲಿಯ ನಿವಾಸದಲ್ಲಿ ಕದ್ದಾಲಿಕೆ ಉಪಕರಣ ಪತ್ತೆಯಾಗಿದೆ ಎಂದು, ನಂತರ ಮುಂಬೈ ನಿವಾಸದಲ್ಲಿ ಉಪಕರಣ ಪತ್ತೆಯಾಗಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.  ‘ಏನೇ ಆದರೂ ಅದೊಂದು ಹುಸಿಯಾದ ಮತ್ತು ನಿರಾಧಾರವಾದ ವರದಿ’ ಎಂದು ಗಡ್ಕರಿ ಅವರು ಸಂಸತ್ತಿನ ಹೊರಗಡೆ ವರದಿಗಾರರನ್ನು ಉದ್ದೇಶಿಸಿ ಮಾತನಾಡಿದರು.

ಈ ಹಿಂದೆಯೂ ಗಡ್ಕರಿ ಅವರು ತಮ್ಮ ನಿವಾಸ­ದಲ್ಲಿ ‘ಕದ್ದಾ­ಲಿಕೆ ಉಪಕರಣ’ ಪತ್ತೆ­ಯಾಗಿ­ರುವು­ದಾಗಿ ಮಾಧ್ಯಮಗಳಲ್ಲಿ ಬಂದ ವರದಿ­ಯನ್ನು ತಳ್ಳಿಹಾಕಿದ್ದರು.

ADVERTISEMENT

ಗಡ್ಕರಿ ಅವರ ನಿವಾಸ­ದಲ್ಲಿ ‘ಕದ್ದಾ­ಲಿಕೆ ಉಪಕರಣ’ ಪತ್ತೆ­ಯಾಗಿ­ರುವು­ದರ ಬಗ್ಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಇಂದು ಭಾರಿ ಕೋಲಾಹಲ ಎಬ್ಬಿಸಿತ್ತು.

ಗಡ್ಕರಿ ಅವರ ಮನೆಯಲ್ಲಿ ಅತಿ ಸೂಕ್ಷ್ಮ ಕದ್ದಾಲಿಕೆ ಉಪಕರಣ ಪತ್ತೆಯಾಗಿತ್ತು ಎಂದು ಕೆಲವು ದಿನಗಳ ಹಿಂದೆ ಮಾಧ್ಯಮಗಳು ವರದಿ ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.