ADVERTISEMENT

ಕಲ್ಲಿದ್ದಲು ಖಾಸಗೀಕರಣದ ಸಂಚು: ಸೋನಿಯಾ

ಕಾಂಗ್ರೆಸ್‌ ಅಧ್ಯಕ್ಷೆ ಆರೋಪ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2014, 19:30 IST
Last Updated 29 ನವೆಂಬರ್ 2014, 19:30 IST

ಪಟಮ್ದಾ, ಜಾರ್ಖಂಡ್‌ (ಪಿಟಿಐ): ಕೈಗಾರಿಕೋದ್ಯಮಿಗಳು ಹಾಗೂ ಬಂಡ­ವಾಳ­ಶಾಹಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ದೇಶದ ಕಲ್ಲಿದ್ದಲು ವಲಯ­ವನ್ನು ಖಾಸಗೀಕರಣ ಮಾಡಲು ಹೊರ­ಟಿದ್ದಾರೆ ಎಂದು  ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದರು.

ಶನಿವಾರ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ರ್‍್ಯಾಲಿಯಲ್ಲಿ ಮಾತ­­ನಾಡಿದ ಸೋನಿಯಾ, ಉದ್ಯಮಿ­ಗಳ ಹಿತಕ್ಕಾಗಿ   ಮೋದಿ ದೇಶದ ಜನರ ಹಿತ­­ವನ್ನು ಬಲಿ ಕೊಡಲು  ಸಿದ್ಧರಾಗಿ­ದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನರ ಹಿತ­ವನ್ನು ಗಮನದಲ್ಲಿಟ್ಟು­ಕೊಂಡು ಕಾಂಗ್ರೆಸ್‌ ಕಲ್ಲಿದ್ದಲು ವಲಯ­ವನ್ನು ರಾಷ್ಟ್ರೀಕರಣಗೊಳಿಸಿತ್ತು. ಆದರೆ, ಬಿಜೆಪಿ ಕೆಲವೇ ಕೆಲವು ಉದ್ಯಮಿಗಳ ಲಾಭಕ್ಕಾಗಿ ಕಲ್ಲಿದ್ದಲು ವಲಯವನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದು ಟೀಕಿಸಿದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ (ನರೇಗಾ), ಭೂಸ್ವಾಧಿನ ಕಾಯ್ದೆ  ಹಾಗೂ ಮಾಹಿತಿ ಹಕ್ಕು ಕಾಯ್ದೆಗಳನ್ನು ಮೋದಿ ದುರ್ಬಲ ಮಾಡುವ ಸಂಚು ರೂಪಿಸಿದ್ದಾರೆ. ಬಿಜೆಪಿ ಬಹಿರಂಗವಾಗಿ ಏನನ್ನು ಹೇಳು­ತ್ತದೆಯೋ ಅದಕ್ಕೆ ಅಂತರಂಗದಲ್ಲಿ ಅದಕ್ಕೆ ತತ್ವಿರುದ್ಧವಾಗಿ ನಡೆದುಕೊಳ್ಳುತ್ತದೆ ಎಂದು ನುಡಿದರು.
 
ಗುಜ­ರಾತ್‌ನಲ್ಲಿ ಬಂಡವಾಳಶಾಹಿ­ಗಳಿಗೆ ನೀಡಲು ಬುಡಕಟ್ಟು ಜನಾಂಗದ ಭೂಮಿಯನ್ನು ಕಸಿದುಕೊಂಡ ಮೋದಿ ಸರ್ಕಾರ ಆದಿವಾಸಿಗಳನ್ನು ನಿರ್ಗತಿಕರ­ನ್ನಾಗಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.