ADVERTISEMENT

ಕಾಶ್ಮೀರ ಕಣಿವೆಯಲ್ಲಿ ಮಳೆ, ಹಿಮಪಾತ; ಶ್ರೀನಗರ–ಲೇಹ್ ಹೆದ್ದಾರಿ, ಮೊಘಲ್ ರಸ್ತೆ ಸಂಚಾರ ಬಂದ್‌

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 13:20 IST
Last Updated 18 ನವೆಂಬರ್ 2017, 13:20 IST
ಕಾಶ್ಮೀರ ಕಣಿವೆಯಲ್ಲಿ ಮಳೆ, ಹಿಮಪಾತ; ಶ್ರೀನಗರ–ಲೇಹ್ ಹೆದ್ದಾರಿ, ಮೊಘಲ್ ರಸ್ತೆ ಸಂಚಾರ ಬಂದ್‌
ಕಾಶ್ಮೀರ ಕಣಿವೆಯಲ್ಲಿ ಮಳೆ, ಹಿಮಪಾತ; ಶ್ರೀನಗರ–ಲೇಹ್ ಹೆದ್ದಾರಿ, ಮೊಘಲ್ ರಸ್ತೆ ಸಂಚಾರ ಬಂದ್‌   

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಶನಿವಾರ ಮುಂಜಾನೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.

ಕಾಶ್ಮೀರ ಕಣಿವೆ ಮತ್ತು ಜಮ್ಮು ವಿಭಾಗದ ಶಿಖರಗಳಲ್ಲಿ ಹಿಮ ಸುರಿಯುತ್ತಿದೆ. ಶ್ರೀನಗರ– ಲೇಹ್ ಹೆದ್ದಾರಿಯಲ್ಲಿ ಹಿಮಪಾತ ಕಾರಣ ಸತತ ಎರಡನೇ ದಿನ ವಾಹನ ಸಂಚಾರ ಸಾಧ್ಯವಾಗಿಲ್ಲ.

ಹಾಗೆಯೇ ಜಮ್ಮು ವಿಭಾಗದ ಪೂಂಚ್ ಮತ್ತು ಶೋಪಿಯಾನ್‌ ಜಿಲ್ಲೆಗಳನ್ನು ಸಂಪರ್ಕಿಸುವ ಮೊಘಲ್ ರಸ್ತೆಯಲ್ಲಿ ಪೀರ್ ಕಿ ಗಲಿಯಿಂದ ಪುಶಾನ್ ನಡುವೆ ಸುಮಾರು 20 ಕಿ.ಮೀ ಉದ್ದಕ್ಕೆ ರಸ್ತೆಯಲ್ಲಿ ಎರಡು ಅಡಿ ಎತ್ತರ ಹಿಮ ಬಿದ್ದಿದೆ. ಈ ಮಾರ್ಗದಲ್ಲೂ ವಾಹನ ಸಂಚಾರ ಸ್ಥಗಿತಗೊಂಡಿದೆ.

ADVERTISEMENT

300 ಕಿ.ಮೀ. ಉದ್ದದ ಜಮ್ಮು– ಶ್ರೀನಗರ ಹೆದ್ದಾರಿಯಲ್ಲಿ ರಾತ್ರಿ ಹೊತ್ತು ವಾಹನ ಸಂಚಾರ ಮಾಡದಿರುವಂತೆ ಅಧಿಕಾರಿಗಳು ಸಲಹೆ ಮಾಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಹಿಮಪಾತವಾಗಿದ್ದು, ಮನೆಗಳ ಮೇಲೆ ಹಿಮ ಹೊದಿಕೆಯಂತೆ ಕಾಣುತ್ತಿದೆ. ರಸ್ತೆಗಳು ಹಿಮಾವೃತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.