ADVERTISEMENT

ಕೃಷಿ ವೆಚ್ಚಕ್ಕಿಂತ ಒಂದೂವರೆ ಪಟ್ಟು ‘ಕನಿಷ್ಠ ಬೆಂಬಲ ಬೆಲೆ’

ಪಿಟಿಐ
Published 17 ಮಾರ್ಚ್ 2018, 19:30 IST
Last Updated 17 ಮಾರ್ಚ್ 2018, 19:30 IST
ಕೃಷಿ ವೆಚ್ಚಕ್ಕಿಂತ ಒಂದೂವರೆ ಪಟ್ಟು ‘ಕನಿಷ್ಠ ಬೆಂಬಲ ಬೆಲೆ’
ಕೃಷಿ ವೆಚ್ಚಕ್ಕಿಂತ ಒಂದೂವರೆ ಪಟ್ಟು ‘ಕನಿಷ್ಠ ಬೆಂಬಲ ಬೆಲೆ’   

ನವದೆಹಲಿ: ಕೃಷಿ ಉತ್ಪನ್ನಗಳಿಗೆ ಶೀಘ್ರದಲ್ಲಿಯೇ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಪ್ರತಿ ಬೆಳೆಗೆ ತಗಲುವ ಎಲ್ಲಾ ಸ್ವರೂಪದ ವೆಚ್ಚಗಳನ್ನು ಪರಿಗಣಿಸಿಯೇ ಎಂಎಸ್‌ಪಿ ನಿಗದಿ ಮಾಡುತ್ತೇವೆ ಎಂದು ಅವರು ಶನಿವಾರ ಆರಂಭವಾದ ಕೃಷಿ ಉನ್ನತಿ ಮೇಳದಲ್ಲಿ ಘೋಷಿಸಿದರು.

‘ಎಂಎಸ್‌ಪಿ ಬಗ್ಗೆ ಹಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಆ ಬಗ್ಗೆ ಗಮನ ಕೊಡಬೇಡಿ’ ಎಂದು ಅವರು ಇದೇ ವೇಳೆ ರೈತರಿಗೆ ಕಿವಿಮಾತು ಹೇಳಿದರು.

ADVERTISEMENT

ನಿಜವಾದ ಫಲಾನುಭವಿಗಳಿಗೆ ಎಂಎಸ್‌ಪಿ ಲಾಭ ತಲುಪುವಂತೆ ಹೊಸ ವ್ಯವಸ್ಥೆ ರೂಪಿಸುವ ಬಗ್ಗೆ ಎಲ್ಲ ರಾಜ್ಯ ಸರ್ಕಾರಗಳ ಜತೆ ಮಾತುಕತೆ ನಡೆಯುತ್ತಿದೆ. ರೈತರ ಆದಾಯ ದುಪ್ಪಟ್ಟು ಮಾಡುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ವಿವರಿಸಿದರು.

ರೈತರು ಎಣ್ಣೆಬೀಜಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕು. ಇದರಿಂದ ಖಾದ್ಯ ತೈಲಗಳ ಆಮದನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಸಾವಯವ ಕೃಷಿಗೆ ಒತ್ತು ನೀಡುವ ಮೂಲಕ 2022ರ ವೇಳೆಗೆ ಯೂರಿಯಾ ಬಳಕೆಯನ್ನು ಅರ್ಧದಷ್ಟು ಕಡಿಮೆ ಮಾಡಬೇಕು ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.