ADVERTISEMENT

ಕೇಂದ್ರಕ್ಕೆ ಪತ್ರ ಬರೆದ ಕೇರಳ ಸಿ.ಎಂ

​ಪ್ರಜಾವಾಣಿ ವಾರ್ತೆ
Published 27 ಮೇ 2017, 19:30 IST
Last Updated 27 ಮೇ 2017, 19:30 IST
ತಿರುವನಂತಪುರ: ‘ಲಕ್ಷಾಂತರ ಜನರ ಜೀವನ ಮತ್ತು ಜೀವನೋಪಾಯವನ್ನು ರಕ್ಷಿಸುವುದಕ್ಕಾಗಿ ಮತ್ತು ಸಂವಿಧಾನದ ಮೂಲಭೂತ ತತ್ವಗಳನ್ನು ಕಾಪಾಡುವುದಕ್ಕಾಗಿ ಈಗ ಹೊರಡಿಸಿರುವ ಅಧಿಸೂಚನೆಯನ್ನು ವಾಪಸ್‌ ಪಡೆಯಬೇಕು’ ಎಂದು ಮನವಿ ಮಾಡಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
 
 ‘ನಿಯಮಗಳಲ್ಲಿರುವ ಜಿಲ್ಲಾ ಪ್ರಾಣಿ ಮಾರುಕಟ್ಟೆ ಮೇಲ್ವಿಚಾರಣಾ ಸಮಿತಿಗಳು ಮತ್ತು ಪ್ರಾಣಿ ಮಾರುಕಟ್ಟೆ ಸಮಿತಿಯ ರಚನೆ ಪ್ರಸ್ತಾಪಗಳು, ರೈತರ ನಡುವೆ ಮುಕ್ತವಾಗಿ ನಡೆಯುವ ಜಾನುವಾರು ವ್ಯಾಪಾರಕ್ಕೆ ಅಪಾಯ ತಂದೊಡ್ಡಿದೆ’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
 
‘ರಂಜಾನ್‌ ತಿಂಗಳ ಆರಂಭದಲ್ಲೇ  ನಿಬಂಧನೆಗಳನ್ನು ಹೇರಿರುವುದು, ತಮ್ಮ ಮೇಲೆ ಸರ್ಕಾರ ನೇರವಾಗಿ ದಾಳಿ ಮಾಡುತ್ತಿದೆ ಎಂಬ ಭಾವನೆಯನ್ನು ನಿರ್ದಿಷ್ಟ ಸಮುದಾಯದ ಜನರಲ್ಲಿ ಮೂಡುವಂತೆ ಮಾಡಿದೆ’ ಎಂದು ವಿಜಯನ್‌ ಹೇಳಿದ್ದಾರೆ.
 
ಗೋಮಾಂಸ ಉತ್ಸವ:   ಅಧಿಸೂಚನೆ ವಿರೋಧಿಸಿ ರಾಜ್ಯದಾದ್ಯಂತ ವಿವಿಧ ಪಕ್ಷಗಳು ಪಕ್ಷಭೇದ ಮರೆತು ಗೋಮಾಂಸ ಉತ್ಸವ ಆಯೋಜಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.