ADVERTISEMENT

ಕೇಂದ್ರ ಸಚಿವ ಸಾಂಬಶಿವ ರಾವ್‌ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2014, 19:30 IST
Last Updated 3 ಏಪ್ರಿಲ್ 2014, 19:30 IST

ನವದೆಹಲಿ(ಪಿಟಿಐ): ಆಂಧ್ರಪ್ರದೇಶ ವಿಭಜನೆ ವಿರೋಧಿಸಿ ಕೇಂದ್ರ ಜವಳಿ ಖಾತೆ ಸಚಿವ ಕೆ.ಸಾಂಬಶಿವ ರಾವ್‌ ಗುರುವಾರ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‌ನಿಂದ ಲೋಕ­ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿರುವ ಇವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ.

ಆಂಧ್ರಪ್ರದೇಶದಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾ­ಗಿದ್ದ ರಾವ್‌ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಯಾಗಿದ್ದಾರೆ ಎಂದು ವರದಿ­ಗಳು ಹೇಳಿವೆ. ಆದರೆ ಬಿಜೆಪಿ ಮುಖಂಡರ ಜತೆ ಮಾತು­ಕತೆ ನಡೆಸಿರುವುದನ್ನು ರಾವ್‌ ಅಲ್ಲಗಳೆದಿದ್ದಾರೆ.
ಒಂದು ವೇಳೆ ರಾವ್‌ ಬಿಜೆಪಿ ಸೇರಿದರೆ  ಸೀಮಾಂಧ್ರ ಭಾಗದ ಎರಡನೇ ಕಾಂಗ್ರೆಸ್‌ ಸಂಸದ ಪಕ್ಷ ತ್ಯಜಿಸಿದಂತಾ ಗು­ತ್ತದೆ. ಈ ಮೊದಲು ಆಂಧ್ರ ವಿಭಜನೆ ವಿರೋಧಿಸಿ ಸಚಿವೆ ಪುರಂದೇಶ್ವರಿ ಅವರು ಪಕ್ಷದಿಂದ ಹೊರಬಂದಿದ್ದರು.

ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಭೇಟಿಯಾದ ರಾವ್‌, ರಾಜೀನಾಮೆ ಪತ್ರ ನೀಡಿ ಕೂಡಲೇ ಅಂಗೀಕರಿಸಿ ಸಚಿವ ಸ್ಥಾನದ ಜವಾಬ್ದಾರಿ ಯಿಂದ ಬಿಡುಗಡೆ ಮಾಡ­ಬೇಕು ಎಂದು ಕೋರಿದರು.  ಆಂಧ್ರ ವಿಭಜನೆಗಾಗಿ ರಚಿಸಲಾಗಿರುವ ಸಚಿವರ ಸಮಿತಿಯಲ್ಲೂ ಮುಂದುವರಿ ಯುವುದಿಲ್ಲ ಎಂದು ರಾವ್‌ ತಿಳಿಸಿ ದ್ದಾರೆ. ರಾಜ್ಯ ವಿಭಜನೆಯನ್ನು ಕೇಂದ್ರ ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ. ಇದರಿಂದ ತಮಗೆ ನೋವಾಗಿದೆ ಎಂದು ಅವರು ದೂರಿದ್ದಾರೆ.ಆಂಧ್ರಪ್ರದೇಶ ವಿಭಜನೆ ವಿರೋಧಿಸಿ ಕೇಂದ್ರ ಜವಳಿ ಖಾತೆ ಸಚಿವ ಕೆ.ಸಾಂಬಶಿವ ರಾವ್‌ ಗುರುವಾರ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‌ನಿಂದ ಲೋಕ­ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿರುವ ಇವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ.

ಆಂಧ್ರಪ್ರದೇಶದಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾ­ಗಿದ್ದ ರಾವ್‌ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಯಾಗಿದ್ದಾರೆ ಎಂದು ವರದಿ­ಗಳು ಹೇಳಿವೆ. ಆದರೆ ಬಿಜೆಪಿ ಮುಖಂಡರ ಜತೆ ಮಾತು­ಕತೆ ನಡೆಸಿರುವುದನ್ನು ರಾವ್‌ ಅಲ್ಲಗಳೆದಿದ್ದಾರೆ.
ಒಂದು ವೇಳೆ ರಾವ್‌ ಬಿಜೆಪಿ ಸೇರಿದರೆ  ಸೀಮಾಂಧ್ರ ಭಾಗದ ಎರಡನೇ ಕಾಂಗ್ರೆಸ್‌ ಸಂಸದ ಪಕ್ಷ ತ್ಯಜಿಸಿದಂತಾ ಗು­ತ್ತದೆ. ಈ ಮೊದಲು ಆಂಧ್ರ ವಿಭಜನೆ ವಿರೋಧಿಸಿ ಸಚಿವೆ ಪುರಂದೇಶ್ವರಿ ಅವರು ಪಕ್ಷದಿಂದ ಹೊರಬಂದಿದ್ದರು.

ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಭೇಟಿಯಾದ ರಾವ್‌, ರಾಜೀನಾಮೆ ಪತ್ರ ನೀಡಿ ಕೂಡಲೇ ಅಂಗೀಕರಿಸಿ ಸಚಿವ ಸ್ಥಾನದ ಜವಾಬ್ದಾರಿ ಯಿಂದ ಬಿಡುಗಡೆ ಮಾಡ­ಬೇಕು ಎಂದು ಕೋರಿದರು.  ಆಂಧ್ರ ವಿಭಜನೆಗಾಗಿ ರಚಿಸಲಾಗಿರುವ ಸಚಿವರ ಸಮಿತಿಯಲ್ಲೂ ಮುಂದುವರಿ ಯುವುದಿಲ್ಲ ಎಂದು ರಾವ್‌ ತಿಳಿಸಿ ದ್ದಾರೆ. ರಾಜ್ಯ ವಿಭಜನೆಯನ್ನು ಕೇಂದ್ರ ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ. ಇದರಿಂದ ತಮಗೆ ನೋವಾಗಿದೆ ಎಂದು ಅವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT