ADVERTISEMENT

ಕೇರಳದಲ್ಲಿ 58 ಮಂದಿ ಮತಾಂತರ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2014, 19:30 IST
Last Updated 25 ಡಿಸೆಂಬರ್ 2014, 19:30 IST

ಕೊಟ್ಟಾಯಂ/ಕೇರಳ (ಪಿಟಿಐ): ಕ್ರಿಸ್‌ಮಸ್‌ ದಿನವಾದ ಗುರುವಾರ ಬಹುತೇಕ ಕ್ರಿಶ್ಚಿಯನ್ನರು ಸೇರಿದಂತೆ ಸುಮಾರು 58 ಮಂದಿ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಹಿಂದು ಧರ್ಮಕ್ಕೆ ಮತಾಂತರ ಹೊಂದಿದರು.

ವಿಶ್ವ ಹಿಂದು ಪರಿಷತ್‌ನ (ವಿಎಚ್‌ಪಿ) ನೇತೃತ್ವದಲ್ಲಿ ಪುಥಿಯಾಕವು ದೇವಿ ದೇವಾಲಯದಲ್ಲಿ ನಡೆದ ಮತಾಂತರ ಕಾರ್ಯಕ್ರಮದಲ್ಲಿ 20 ಕುಟುಂಬಗಳ ಸುಮಾರು 42 ಮಂದಿ ಹಿಂದು ಧರ್ಮ ಸ್ವೀಕರಿಸಿದರೆ, ತಿರುನಕರದ ಶ್ರೀ ಕೃಷ್ಣಸ್ವಾಮಿ ದೇವಾಲಯದಲ್ಲಿ 16 ಮಂದಿ ಮತಾಂತರ ಹೊಂದಿದರು ಎಂದು ವಿಎಚ್‌ಪಿ ಜಿಲ್ಲಾ ಅಧ್ಯಕ್ಷ ಬಾಲಚಂದ್ರ ಪಿಳ್ಳೈ ತಿಳಿಸಿದರು.

ಮತಾಂತರ ಹೊಂದಿದವರಲ್ಲಿ ಒಬ್ಬ ಮುಸ್ಲಿಂ ಸೇರಿದ್ದಾರೆ. ಇವರೆಲ್ಲರೂ ವೈಕೋಮ್, ಕುಮಾರಕ್ಕಂ ಮತ್ತು ಕಾಂಜಿರಪಳ್ಳಿಗಳಿಂದ ಸ್ವ ಇಚ್ಛೆಯಿಂದ ಬಂದು ಮತಾಂತರ ಹೊಂದಿದರು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.