ADVERTISEMENT

ಕ್ಯಾನ್ಸರ್‌: ಪ್ರತಿ ವರ್ಷ 5 ಲಕ್ಷ ಜನ ಸಾವು

​ಪ್ರಜಾವಾಣಿ ವಾರ್ತೆ
Published 6 ಮೇ 2016, 11:29 IST
Last Updated 6 ಮೇ 2016, 11:29 IST
ಕ್ಯಾನ್ಸರ್‌: ಪ್ರತಿ ವರ್ಷ 5 ಲಕ್ಷ ಜನ ಸಾವು
ಕ್ಯಾನ್ಸರ್‌: ಪ್ರತಿ ವರ್ಷ 5 ಲಕ್ಷ ಜನ ಸಾವು   

ನವದೆಹಲಿ (ಪಿಟಿಐ): ಭಾರತದಲ್ಲಿ ಪ್ರತಿ ವರ್ಷ ಕ್ಯಾನ್ಸರ್‌ನಿಂದ 5 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.

ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಲೋಕಸಭೆಯ  ಪ್ರಶ್ನೋತ್ತರ ವೇಳೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾಹಿತಿ ನೀಡಿದರು.

ಮಾರಕ ರೋಗ ಕ್ಯಾನ್ಸರ್‌ಗೆ ಪ್ರತಿ ವರ್ಷ 5 ಲಕ್ಷ ಜನರು ಬಲಿಯಾಗುತ್ತಿದ್ದಾರೆ. ಇವರಲ್ಲಿ ಪುರುಷರು ಹೊಟ್ಟೆ ಹಾಗೂ ಗಂಟಲು ಕ್ಯಾನ್ಸರ್‌ಗೆ ತುತ್ತಾದರೆ, ಮಹಿಳೆಯರು ಸ್ತನ ಮತ್ತು  ಗರ್ಭಕೋಶದ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ.  ಕ್ಯಾನ್ಸರ್ ರೋಗಿಗಳ ವಯಸ್ಸಿನ ಮಾಹಿತಿ ಲಭ್ಯವಾಗಿಲ್ಲ ಎಂದು ನಡ್ಡಾ ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ  20 ಕ್ಯಾನ್ಸರ್  ಸಂಶೋಧನಾ ಸಂಸ್ಥೆಗಳನ್ನು ಹಾಗೂ 50 ತೃತೀಯ ಕೇರ್ ಕ್ಯಾನ್ಸರ್ ಕೇಂದ್ರಗಳನ್ನು ತೆರೆಯಲಾಗುವುದು ಎಂದು ನಡ್ಡಾ  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.