ADVERTISEMENT

ಕ್ಷಮೆ ಯಾಚಿಸದ ಸಲ್ಮಾನ್‌ಗೆ ಆಯೋಗದ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST
ಕ್ಷಮೆ ಯಾಚಿಸದ ಸಲ್ಮಾನ್‌ಗೆ ಆಯೋಗದ ನೋಟಿಸ್‌
ಕ್ಷಮೆ ಯಾಚಿಸದ ಸಲ್ಮಾನ್‌ಗೆ ಆಯೋಗದ ನೋಟಿಸ್‌   

ನವದೆಹಲಿ: ಚಿತ್ರೀಕರಣದ ಸುಸ್ತನ್ನು ಅತ್ಯಾಚಾರಕ್ಕೆ ಒಳಗಾದ ಸ್ತ್ರೀಯ ಯಾತನೆಗೆ ಹೋಲಿಸಿದ್ದ ಸಲ್ಮಾನ್‌ ಖಾನ್‌   ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್‌ ನೀಡಿದ್ದು, ಜುಲೈ 7ರೊಳಗೆ ಆಯೋಗದ ಮುಂದೆ ಹಾಜರಾಗುವಂತೆ ಸೂಚಿಸಿದೆ.

ಸಲ್ಮಾನ್‌ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಆಯೋಗ ಹಿಂದೆಯೇ ಅವರಿಗೆ ನೋಟಿಸ್‌ ನೀಡಿ, ಕ್ಷಮೆ ಯಾಚಿಸುವಂತೆ ಸೂಚಿಸಿತ್ತು. ಆದರೆ ಸಲ್ಮಾನ್‌ ಕ್ಷಮೆ ಯಾಚಿಸುವ ಬದಲು  ವಕೀಲರ ಮೂಲಕ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಲಿಖಿತ ಉತ್ತರ ಕಳುಹಿಸಿದ್ದರು. ಇದರಿಂದ ತೃಪ್ತಿಹೊಂದದ ಆಯೋಗ ಜುಲೈ 7ರೊಳಗೆ ಹಾಜರಾಗಲು ಸೂಚಿಸಿ ನೋಟಿಸ್‌ ನೀಡಿದೆ.

ಸಲ್ಮಾನ್‌ ‘ಸುಲ್ತಾನ್‌’ ಸಿನಿಮಾ ಶೂಟಿಂಗ್‌ನ ಸಂದರ್ಭದಲ್ಲಿ ತನಗಾಗಿದ್ದ ಸುಸ್ತನ್ನು ವಿವರಿಸುವಾಗ ‘ಅತ್ಯಾಚಾರಕ್ಕೆ ಒಳಗಾದ ಮಹಿಳೆಯಂತಾಗಿದ್ದೆ’ ಎಂದಿದ್ದರು. ಈ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.