ADVERTISEMENT

ಗಂಗಾ ಪುನಃಶ್ಚೇತನಕ್ಕೆ 3 ವರ್ಷದ ಗುರಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2014, 12:35 IST
Last Updated 20 ಆಗಸ್ಟ್ 2014, 12:35 IST

ನವದೆಹಲಿ (ಪಿಟಿಐ): ಕಲುಷಿತಗೊಂಡಿರುವ ಪವಿತ್ರ ಗಂಗಾ ನದಿಗೆ ಪುನಃಶ್ಚೇತನ ನೀಡಲು ಕೇಂದ್ರ ಸರ್ಕಾರ ಬುಧವಾರ ಮೂರು ವರ್ಷಗಳ ಗುರಿ ನಿಗದಿ ಪಡಿಸಿದೆ.

‘ಮೂರು ವರ್ಷಗಳಲ್ಲಿ ಗಂಗಾನದಿಗೆ ಪುನಃಶ್ಚೇತನ ಕಲ್ಪಿಸುವ ಆಶಯವಿದೆ. ಈ ಅವಧಿಯಲ್ಲಿ ಕೈಗಾರಿಕೆಗಳು ಹಾಗೂ ಕೊಳಚೆಯಿಂದ ಎದುರಾಗುವ ಮಾಲಿನ್ಯ ಹಾಗೂ ನದಿಯ ದಡದಲ್ಲಿ ಆಗುವ ಮಾಲಿನ್ಯದ ಬಗೆಗಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರು ತಿಳಿಸಿದ್ದಾರೆ.

‘ಭಾರತದಲ್ಲಿ ನೀರಿಗಿರುವ ತೊಂದರೆ  ಹಾಗೂ ವ್ಯವಸ್ಥಾಪಕತ್ವ’ ವಿಷಯದ ಮೇಲೆ ಏರ್ಪಡಿಸಲಾಗಿದ್ದ ಅಂತರರಾಷ್ಟ್ರೀಯ ಕಾರ್ಯಾಗಾರ ಅಂಗವಾಗಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ADVERTISEMENT

ಗಂಗಾನದಿ ಸ್ವಚ್ಛತೆಯ ಯೋಜನೆಗಳು ಇನ್ನಾರು ತಿಂಗಳಲ್ಲಿ ಪ್ರಾರಂಭವಾಗುವ ಸಾಧ್ಯತೆಗಳವೆ ಎಂದು ಗಂಗಾ ಪುನಃಶ್ಚೇತನ ಖಾತೆಯ ಹೆಚ್ಚುವರಿ ಜವಾಬ್ದಾರಿ ಹೊತ್ತಿರುವ ಸಚಿವೆ ಭಾರತಿ  ಅವರು ತಿಳಿಸಿದರು.

ಇದೇ ವೇಳೆ,‘2015–16ನೇ ವರ್ಷವನ್ನು  ಜಲ ಸಂರಕ್ಷಣಾ ಸಂವತ್ಸರ ಎಂದು ಘೋಷಿಸಲು ಸಿದ್ಧತೆ ನಡೆಸಿದ್ದೇವೆ. ಪರಿಸರವನ್ನು ಗಮನದಲ್ಲಿರಿಸಿಕೊಂಡೇ ನದಿಗಳ ಜೋಡಣೆ  ಕೈಗೆತ್ತಿಕೊಳ್ಳಲು ನಾವು ಸಿದ್ಧರಿದ್ದೇವೆ. ಇದನ್ನು ಹತ್ತು ವರ್ಷಗಳಲ್ಲಿ ಮುಗಿಸಲು ಸಾಧ್ಯವಿದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.