ADVERTISEMENT

ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಸೇನೆಯಿಂದ ಷೆಲ್ ದಾಳಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 6:29 IST
Last Updated 22 ಜುಲೈ 2017, 6:29 IST
ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಸೇನೆಯಿಂದ ಷೆಲ್ ದಾಳಿ
ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಸೇನೆಯಿಂದ ಷೆಲ್ ದಾಳಿ   

ಪೂಂಚ್: ಕದನವಿರಾಮ ಉಲ್ಲಂಘಿಸಿರುವ ಪಾಕ್ ಸೇನೆ ಗಡಿ ನಿಯಂತ್ರಣ ರೇಖೆ ಬಳಿ ಷೆಲ್ ದಾಳಿ ನಡೆಸಿದೆ. ಪೂಂಚ್ ಜಿಲ್ಲೆಯ ಕರ್ಮರಾ ವಲಯದಲ್ಲಿರುವ ಫಕೀರ್ ದರಾ ಶಾಲಾ ಆವರಣದಲ್ಲಿ ಷೆಲ್ ದಾಳಿ ನಡೆದಿದ್ದು, ಶಾಲಾ ಕಟ್ಟಡಕ್ಕೆ ಹಾನಿಯಾಗಿದೆ.

ಷೆಲ್ ದಾಳಿಯಿಂದ ಕಟ್ಟಡದ ಕೆಲವು ಭಾಗಗಳು ಕುಸಿದು ಬಿದ್ದಿದ್ದು, ಶಾಲಾ ಗೋಡೆಯ ಮೇಲೆ ಬುಲೆಟ್  ಕಲೆ ಅಚ್ಚೊತ್ತಿದೆ.

ಬುಧವಾರ ಬೆಳಗ್ಗೆಯಿಂದಲೇ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಪಾಕ್ ದಾಳಿಯಿಂದಾಗಿ ಪ್ರಸ್ತುತ ಪ್ರದೇಶದಲ್ಲಿರುವ 25  ಶಾಲೆಗಳನ್ನು ಮುಚ್ಚಲಾಗಿದೆ.

ADVERTISEMENT

ಪೂಂಚ್ ಜಿಲ್ಲೆಯ ಶಹಾಪುರದಲ್ಲಿ ಪಾಕ್ ಸೇನೆ ಗುಂಡಿನ ದಾಳಿ ನಡೆಸಿರುವುದಾಗಿ ಎಎನ್‍ಐ  ಸುದ್ದಿ ಮಾಧ್ಯಮ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.