ADVERTISEMENT

ಗುಜರಾತ್‌: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 9 ಜೂನ್ 2014, 19:30 IST
Last Updated 9 ಜೂನ್ 2014, 19:30 IST

ಭರೂಚಾ (ಪಿಟಿಐ): ವಿವಾಹಿತೆಯ ಮೇಲೆ ಎರಡು ತಿಂಗಳ ಅವಧಿಯಲ್ಲಿ ಮೂರು ಬಾರಿ ಸಾಮೂಹಿಕ ಅತ್ಯಾ­ಚಾರ ನಡೆದ ಘಟನೆ ಗುಜರಾತ್‌ನ ಭರೂಚಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಝಗದಿಯಾ ತಾಲ್ಲೂಕಿನ ಹಲೊದ್‌್ ಗ್ರಾಮದ 26 ವರ್ಷದ ಮಹಿಳೆ ಈ ಸಂಬಂಧ ಎಂಟು ಮಂದಿ ವಿರುದ್ಧ ಪೊಲೀಸರಿಗೆ ಸೋಮವಾರ ದೂರು ನೀಡಿದ್ದಾರೆ.

‘ಎರಡು ತಿಂಗಳ ಹಿಂದೆ ನಾನು ಹತ್ತಿರದ ಗ್ರಾಮಕ್ಕೆ ತೆರಳುತ್ತಿದ್ದೆ. ಆಗ ಅಲ್ಲಿಗೆ ಬಂದ ಇಕ್ಬಾಲ್‌್ ಎಂಬಾತ ಬೈಕ್‌ನಲ್ಲಿ ಕರೆದುಕೊಂಡು ಹೋಗು­ವು­ದಾಗಿ ಹೇಳಿದ. ಪರಿಚಯಸ್ಥ ಎನ್ನುವ ಕಾರಣಕ್ಕೆ ಆತನ ಬೈಕ್‌ ಹತ್ತಿದೆ. ಆದರೆ, ಆತ ರಾಜಪರಡಿ ಎಂಬ ಗ್ರಾಮದ ಬಳಿ ಕರೆದೊಯ್ದು ನನ್ನ ಮೇಲೆ ಅತ್ಯಾಚಾರ ಎಸಗಿದ.

ಎರಡು ವಾರದ ಹಿಂದೆ ಇಕ್ಬಾಲ್‌್ ಸಹೋದರ ಅಬ್ರಾನ್‌್ ಹಾಗೂ ಆತನ ಐವರು ಸ್ನೇಹಿತರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ­ದರು’ ಎಂದು ಮಹಿಳೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.