ADVERTISEMENT

ಗ್ರಾಮೀಣ ಭಾರತ ತೆರೆದಿಟ್ಟ ಸಮೀಕ್ಷೆ

2011 ರ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2015, 12:34 IST
Last Updated 3 ಜುಲೈ 2015, 12:34 IST

ನವದೆಹಲಿ (ಪಿಟಿಐ):  ಗ್ರಾಮೀಣ ಪ್ರದೇಶದ ಮೂರು ಕುಟುಂಬಗಳಲ್ಲಿ  ಒಂದು ಕುಟುಂಬ ಭೂರಹಿತವಾಗಿದ್ದು, ಜೀವನಾಧಾರಕ್ಕಾಗಿ ಕೂಲಿಯನ್ನೇ ಅವಲಂಬಿಸಿದೆ ಎಂದು 2011ರ ಸಾಮಾಜಿಕ ಆರ್ಥಿಕ ಮತ್ತು ಜಾತಿ ಸಮೀಕ್ಷೆ (ಎಸ್‌ಇಸಿಸಿ) ಹೇಳಿದೆ.

ಶುಕ್ರವಾರ ಇಲ್ಲಿ ಸಮೀಕ್ಷೆ  ಬಿಡುಗಡೆ ಮಾಡಿದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, ಕಳೆದ 7–8 ದಶಕದ ನಂತರ ಇದೇ ಮೊದಲ ಬಾರಿಗೆ ಕಾಗದ ರಹಿತವಾಗಿ (ಎಲೆಕ್ಟ್ರಾನಿಕ್‌ ಉಪಕರಣ ಬಳಸಿ) ಈ ಸಮೀಕ್ಷೆ ನಡೆಸಲಾಗಿದೆ.   ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಸಂಗ್ರಹಿಸಿರುವ ಈ ಬೃಹತ್‌ ದತ್ತಾಂಶದಲ್ಲಿ ದೇಶದ 640 ಜಿಲ್ಲೆಗಳ ಸ್ಪಷ್ಟ ಚಿತ್ರಣ ಇದೆ. ಸಮೀಕ್ಷೆಯಲ್ಲಿರುವ ಅಂಕಿ ಅಂಶಗಳು ನೀತಿ ನಿರೂಪಕರಿಗೆ, ರಾಜ್ಯಸರ್ಕಾರಗಳಿಗೆ ಅತ್ಯಂತ ಮಹತ್ವದ್ದಾಗಿವೆ’ ಎಂದರು. 

ಸಮೀಕ್ಷೆ ಪ್ರಕಾರ, ಗ್ರಾಮೀಣ ಪ್ರದೇಶದ ಶೇ 23.52ರಷ್ಟು ಕುಟುಂಬಗಳಲ್ಲಿ, ಸುಶಿಕ್ಷಿತರೇ (25 ವರ್ಷಕ್ಕಿಂತ ಹೆಚ್ಚಿನವರು) ಇಲ್ಲ. ದೇಶದ 24.39 ಕೋಟಿ ಕುಟುಂಬಗಳಲ್ಲಿ 17.91 ಕೋಟಿ ಕುಟುಂಬಗಳು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತವೆ.  ಇದರಲ್ಲಿ 10.69 ಕೋಟಿ ಕುಟುಂಬಗಳನ್ನು ಭೂ ರಹಿತ ಕಾರ್ಮಿಕರು ಎಂದು ಗುರುತಿಸಲಾಗಿದೆ ಎಂದು ಈ ಸಮೀಕ್ಷೆ ವಿವರಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT