ADVERTISEMENT

ಚಳಿಗೆ ಐವರ ಸಾವು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2014, 19:30 IST
Last Updated 16 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ): ಉತ್ತರ ಭಾರತದಲ್ಲಿ ಕುಳಿರ್ಗಾಳಿ ತೀವ್ರವಾ­ಗಿದ್ದು, ಮೈ ಕೊರೆಯುವ ಚಳಿಗೆ ಉತ್ತರ ಪ್ರದೇಶದಲ್ಲಿ ಐವರು ಸಾವನ್ನಪ್ಪಿದ್ದಾರೆ. ದಟ್ಟ ಮಂಜಿನ ಕಾರಣ  ರೈಲು ಮತ್ತು ರಸ್ತೆ ಸಂಚಾ­ರಕ್ಕೆ ಅಡಚಣೆಯಾಗಿದೆ.

ದೆಹಲಿಯಲ್ಲಿ ಕನಿಷ್ಠ ತಾಪಮಾನ 9 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಗರಿಷ್ಠ ತಾಪಮಾನ 19.3 ಡಿಗ್ರಿ ಸೆಲ್ಸಿಯಸ್‌ಗೆ ಸ್ಥಿರಗೊಂಡಿದೆ. ಮಂಗಳವಾರ ಬೆಳಿಗ್ಗೆ 8.30ಕ್ಕೆ ಅನ್ವಯವಾಗುವಂತೆ ಕಳೆದ 24 ತಾಸುಗಳಲ್ಲಿ 13.3 ಎಂ.ಎಂ. ಮಳೆ ಆಗಿದೆ.

ರಾಜಸ್ತಾನದ ಮೌಂಟ್‌ ಅಬುವಿನಲ್ಲಿ   ಅತ್ಯಂತ ಕಡಿಮೆ (0.4 ಡಿಗ್ರಿ ಸೆಲ್ಸಿಯಸ್‌) ತಾಪಮಾನ ದಾಖಲಾಗಿದೆ. ಇದರಿಂದ ನಕ್ಕಿ ಸರೋವರದ ನೀರು ಹೆಪ್ಪುಗಟ್ಟಿ ಮಂಜುಗಡ್ಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT