ADVERTISEMENT

ಚಿತ್ರೋತ್ಸವ: ಸಿನಿಮಾ ಆಯ್ಕೆ ಸುಲಭವಲ್ಲ

ಪ್ರೇಮಕುಮಾರ್ ಹರಿಯಬ್ಬೆ
Published 24 ನವೆಂಬರ್ 2015, 20:14 IST
Last Updated 24 ನವೆಂಬರ್ 2015, 20:14 IST

ಪಣಜಿ: ಭಾರತದ ಹಲವು ರಾಜ್ಯಗಳಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವಗಳನ್ನು ಆಯೋಜಿಸಲಾಗುತ್ತಿದ್ದರೂ ಅವುಗಳಲ್ಲಿ ಜಗತ್ತಿನ ಅತ್ಯುತ್ತಮ ಸಿನಿಮಾಗಳನ್ನು ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ ಎಂದು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಕಾರ್ಯಕ್ರಮ ಸಂಯೋಜಕಿ ಮಾರ್ಟಿನ್‌ ಆರ್ಮಾಂಡ್‌ ಅಭಿಪ್ರಾಯಪಟ್ಟರು.

ಇಲ್ಲಿ ನಡೆಯುತ್ತಿರುವ 46ನೇ ಅಂತರರಾಷ್ಟ್ರೀಯ ಚಿತ್ರೋತ್ಸವದ ಅಂಗ ವಾಗಿ ಭಾರತೀಯ ಫಿಲ್ಮ್‌ ಸೊಸೈಟಿಗಳ ಒಕ್ಕೂಟ ಇಂದು ಏರ್ಪ ಡಿಸಿದ್ದ ಚಿತ್ರೋ ತ್ಸವ ಸಂಘಟನೆಯ ಸವಾಲುಗಳು ಎಂಬ ವಿಷಯ ಕುರಿತ ಬಹಿರಂಗ ಸಂವಾದ ದಲ್ಲಿ ಅವರು ಮಾತನಾಡುತ್ತಿದ್ದರು.

ಅಂತರರಾಷ್ಟ್ರೀಯ ಚಿತ್ರೋತ್ಸವ ಗಳಲ್ಲಿ ತಮ್ಮ ಸಿನಿಮಾ ಪ್ರದರ್ಶನ­ವಾಗ ಬೇಕೆಂಬುದು ಪ್ರತಿಯೊಬ್ಬ ಚಿತ್ರ ನಿರ್ಮಾ ಪಕ ಹಾಗೂ ನಿರ್ದೇಶಕನ ಕನಸು. ಭಾರತ ಮಾತ್ರವಲ್ಲ, ಜಗತ್ತಿನ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಗೊಳ್ಳುವ ಸಿನಿಮಾಗಳನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸ. ನೂರಾರು ಸಿನಿಮಾ ಗಳನ್ನು ನೋಡಿ ಅಂತಿಮ ಆಯ್ಕೆ ಮಾಡು ವುದು ನಿಜಕ್ಕೂ ಕಷ್ಟದ  ಕೆಲಸ.

ಅತ್ಯು ತ್ತಮ ಸಿನಿಮಾ ಗಳನ್ನು ಜಗತ್ತಿನ ಸಿನಿಮಾ ಸಕ್ತರು ನೋಡುವಂತಾಗಬೇಕು ಎನ್ನುವ ಆಶಯವನ್ನು ಕಾರ್ಯರೂಪಕ್ಕೆ ತರು ವುದು ಮಾತನಾಡುವಷ್ಟು ಸುಲಭ ಅಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಚಲನ ಚಿತ್ರೋತ್ಸವ ನಿರ್ದೇಶನಾಲ­ಯದ (ಡಿಎಫ್‌ಎಫ್‌) ನಿರ್ದೇಶಕ ಸಿ. ಸೆಂಥಿಲ್‌ರಾಜನ್‌ ಅವರು ಮಾತನಾಡಿ  ಪ್ರಸ್ತುತ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳು ತ್ತಿ ರುವ ಸಿನಿಮಾಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಅತ್ಯಂತ ಕಠಿಣ ವಾಗಿತ್ತು.

700 ಚಲನಚಿತ್ರಗಳನ್ನು ಸಿನಿಮಾ ಪರಿಣಿತರು ದೊಡ್ಡ ತೆರೆಯ ಮೇಲೆ ವೀಕ್ಷಿಸಿ ಅವುಗಳ ಪೈಕಿ 187 ಚಿತ್ರಗಳನ್ನು ಅಂತಿಮಗೊಳಿಸಿ ದರು. ದೇಶದ ಹಲವು ರಾಜ್ಯಗಳ ಚಿತ್ರೋತ್ಸವ ಗಳ ಆಯ್ಕೆ ಪ್ರಕ್ರಿಯೆಯೂ ಇಷ್ಟೇ ಕಷ್ಟದ ಹಾಗೂ ಅಪಾರ ತಾಳ್ಮೆಯನ್ನು ಬಯಸುವ ಕೆಲಸ ಎಂದು ಅವರು ನುಡಿದರು.

ವೆನಿಸ್‌ ಚಿತ್ರೋತ್ಸವದ ಕ್ಯುರೇಟರ್‌ ಪಾಲೊ ಬೆರ್ಟೊಲಿನ್‌ ಮಾತನಾಡಿ ಬರ್ಲಿನ್‌ ಮತ್ತು ವೆನಿಸ್‌ ಚಿತ್ರೋತ್ಸವ ಗಳಲ್ಲಿ ವಿಶ್ವದ ಪ್ರಿಮಿಯರ್‌ ಸಿನಿಮಾ ಗಳನ್ನು ಮಾತ್ರವೇ ಆಯ್ಕೆ ಮಾಡ ಲಾಗುತ್ತದೆ. ಅಂದಾಜು 3000 ಸಿನಿಮಾ ಗಳನ್ನು ಆಯ್ಕೆ ಸಮಿತಿ ಮುಂದೆ ಬರು ತ್ತವೆ. ಅವನ್ನೆಲ್ಲ ನೋಡಿಯೇ ಅಂತಿಮ ಗೊಳಿಸಲಾಗುತ್ತದೆ. ಚಿತ್ರಗಳ ನಡುವೆ ಪೈಪೋಟಿ ಮತ್ತು  ಹಲವು ಬಗೆಯ ಒತ್ತ ಡಗಳನ್ನು ನಿವಾರಿಸಿಕೊಂಡು ಅಂತಿಮ ಆಯ್ಕೆ ನಡೆಯುತ್ತದೆ ಎಂದು ನುಡಿದರು.

ಬೂಸಾನ್‌ ಚಿತ್ರೋತ್ಸವದ ಏಷಿಯಾ ದೇಶಗಳ ಸಿನಿಮಾ ಕಾರ್ಯಕ್ರಮ ಸಂಯೋಜಕ ಕಿಮ್‌ ಯಂಗ್‌ ವೂ ಅವರು ಮಾತನಾಡಿ ಬೂಸಾನ್‌ ಚಿತ್ರೋ ತ್ಸವ ಯುವ ಪ್ರತಿಭೆಗಳಿಗೆ ಹೆಚ್ಚಿನ ಉತ್ತೇ ಜನ ನೀಡುತ್ತಿದೆ. ಆದರೂ ಆಯ್ಕೆ ಪ್ರಕ್ರಿಯೆ ಸುಲಭವಾಗಿಲ್ಲ ಎಂದರು.

ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಕಲಾತ್ಮಕ ನಿರ್ದೇ ಶಕ ಎನ್‌. ವಿದ್ಯಾಶಂಕರ್‌ ಮಾತ ನಾಡಿ ಬೆಂಗಳೂರಿನಲ್ಲಿ ಮೂಲಭೂತ ಸೌಲಭ್ಯ ಗಳ ಕೊರತೆ ಇದ್ದರೂ ಚಿತ್ರೋತ್ಸವವನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಅನು ಗುಣವಾಗಿ ಸಂಘಟಿಸುವ ಪ್ರಯತ್ನ ಮಾಡುತ್ತಿದ್ದೇವೆ. ಈ ವರ್ಷ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಚಿತ್ರೋ ತ್ಸವ ನಡೆಯಲಿದೆ.

ADVERTISEMENT

ಅಂತರರಾಷ್ಟ್ರೀಯ, ಏಷಿಯಾ,ಭಾರತೀಯ ಹಾಗೂ ಕನ್ನಡ ಸಿನಿಮಾ ವಿಭಾಗಗಳಲ್ಲಿ  ಪ್ರತ್ಯೇಕ ಸ್ಪರ್ಧೆ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಸಿನಿಮಾ ಸಂಸ್ಕೃತಿ ಮತ್ತು ಚಿತ್ರೋದ್ಯಮ ದೊಡ್ಡದಾಗಿ ಬೆಳೆದಿದೆ. ಚಿತ್ರೋತ್ಸವ ಸಂಘಟಿಸುವ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುವ ಬೌದ್ಧಿಕ ಮೂಲ ಸೌಕರ್ಯ ಕರ್ನಾಟಕದಲ್ಲಿದೆ ಎಂದು ನುಡಿದರು.

ಭಾರತೀಯ ಸಿನಿಮಾ ಸೊಸೈಟಿಗಳ ಒಕ್ಕೂಟದ ಹಿರಿಯ ಉಪಾಧ್ಯಕ್ಷ ಸುಧೀರ್‌ ಬೋಸ್‌ ಸಂವಾದದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.