ADVERTISEMENT

'ಜಗನ್ನಾಥ ರಸಗುಲ್ಲಾ'ಗೆ ಭೌಗೋಳಿಕ ಮಾನ್ಯತೆ ಪಡೆಯಲು ಮುಂದಾದ ಒಡಿಶಾ

ಪಿಟಿಐ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
'ಜಗನ್ನಾಥ ರಸಗುಲ್ಲಾ'ಗೆ  ಭೌಗೋಳಿಕ ಮಾನ್ಯತೆ ಪಡೆಯಲು ಮುಂದಾದ ಒಡಿಶಾ
'ಜಗನ್ನಾಥ ರಸಗುಲ್ಲಾ'ಗೆ ಭೌಗೋಳಿಕ ಮಾನ್ಯತೆ ಪಡೆಯಲು ಮುಂದಾದ ಒಡಿಶಾ   

ಭುವನೇಶ್ವರ: ‘ಜಗನ್ನಾಥ ರಸಗುಲ್ಲಾ’ಗೆ ಭೌಗೋಳಿಕ ಮಾನ್ಯತೆ ಪಡೆಯಲು ಒಡಿಶಾ ಸರ್ಕಾರ ಮುಂದಾಗಿದೆ.

ಈ ಮೊದಲು ‘ಒಡಿಶಾ ರಸಗುಲ್ಲಾ’ಗೆ ಭೌಗೋಳಿಕ ಮಾನ್ಯತೆ ಪಡೆಯಲು ಪ್ರಯತ್ನಿಸಿತ್ತು. ಆದರೆ, ಪಶ್ಚಿಮ ಬಂಗಾಳದ ಜತೆ ನಡೆದ ಪೈಪೋಟಿಯಲ್ಲಿ ವಿಫಲವಾದ ಬಳಿಕ ಈಗ ತನ್ನ ನಿರ್ಧಾರವನ್ನು ಬದಲಿಸಿಕೊಂಡಿದೆ.

ಪುರಿ ದೇವಾಲಯದಲ್ಲಿ ಜಗನ್ನಾಥಗೆ ಅರ್ಪಿಸುವ ‘ಜಗನ್ನಾಥ ರಸಗುಲ್ಲಾ’ಗೆ ಭೌಗೋಳಿಕ ಮಾನ್ಯತೆ ಪಡೆಯಲಾಗುವುದು. ಕಾನೂನು ತಜ್ಞರು ಮತ್ತು ಉದ್ಯಮಿಗಳ ಜತೆ ಸಮಾಲೋಚನೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಪ್ರಫುಲ್‌ ಸಾಮಾಲ್ ತಿಳಿಸಿದ್ದಾರೆ.

ADVERTISEMENT

ರಾಜ್ಯದ ಪರವಾಗಿ ಜಗನ್ನಾಥ ದೇವಾಲಯದ ಆಡಳಿತ ಮಂಡಳಿ ಮಾನ್ಯತೆಗೆ  ಅರ್ಜಿ ಸಲ್ಲಿಸಲಿದೆ. ನವೆಂಬರ್‌ 12ರಂದು ಪಶ್ಚಿಮ ಬಂಗಾಳದ ‘ಬಂಗಾಳ ರಸಗುಲ್ಲಾ’ಗೆ ಭೌಗೋಳಿಕ ಮಾನ್ಯತೆ ದೊರೆತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.