ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಕಳೆದ 74 ದಿನಗಳಿಂದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಯಾ ಅವರು ಆಸ್ಪತ್ರೆಗೆ ದಾಖಲಾದ ದಿನದಿಂದ ಇಂದಿನವರೆಗೆ ಅವರ ಆರೋಗ್ಯ ಸ್ಥಿತಿಯಲ್ಲಾದ ಏರುಪೇರುಗಳ ಬಗ್ಗೆ ಇಲ್ಲಿದೆ ಮಾಹಿತಿ.
ಸೆಪ್ಟೆಂಬರ್ 22 : ಜ್ವರ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದ ಜಯಾ ಚೆನ್ನೈ ಅಪೋಲೊ ಆಸ್ಪತ್ರೆಗೆ ದಾಖಲು
ಸೆಪ್ಟೆಂಬರ್ 29: ಚಿಕಿತ್ಸೆಗೆ ಸ್ಪಂದನೆ. ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿಯಲು ಸೂಚನೆ
ಅಕ್ಟೋಬರ್ 1 : ಜಯಾ ಆರೋಗ್ಯವಾಗಿದ್ದು, ಕಚೇರಿ ಕೆಲಸ ಮಾಡುತ್ತಿದ್ದಾರೆ ಎಂಬ ವದಂತಿ ತಳ್ಳಿ ಹಾಕಿದ ಎಐಎಡಿಎಂಕೆ
ಅಕ್ಟೋಬರ್ 2 : ಲಂಡನ್ನ ತಜ್ಞ ಡಾ. ರಿಚರ್ಡ್ ಬೀಲೆ ಅವರಿಂದ ಚಿಕಿತ್ಸಾ ಸಲಹೆ
ಅಕ್ಟೋಬರ್ 6: ಹೆಚ್ಚಿನ ಚಿಕಿತ್ಸೆ ನೀಡಲು ಎಐಐಎಂಎಸ್ ವೈದ್ಯದ ತಂಡ ಚೆನ್ನೈಗೆ ಆಗಮನ
ನವೆಂಬರ್ 3: ಜಯಾ ಸಂಪೂರ್ಣ ಗುಣಮುಖ- ಅಪೋಲೊ ಆಸ್ಪತ್ರೆ ಹೇಳಿಕೆ
ನವೆಂಬರ್ 13 : ಕೆಲಸಕ್ಕೆ ಮರಳಲು ಸಾಧ್ಯ ಎಂದು ಪತ್ರಕ್ಕೆ ಸಹಿ ಹಾಕಿದ ಜಯಾ
ನವೆಂಬರ್ 19: ಐಸಿಯುನಿಂದ ವಾರ್ಡ್ಗೆ ಶಿಫ್ಟ್
ಡಿಸೆಂಬರ್ 4 : ತೀವ್ರ ಹೃದಯ ಸ್ತಂಭನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.