ADVERTISEMENT

ಜಾರ್ಖಂಡ್‌ನಲ್ಲಿ ಬಿರುಗಾಳಿಗೆ 7 ಮಂದಿ ಬಲಿ

​ಪ್ರಜಾವಾಣಿ ವಾರ್ತೆ
Published 31 ಮೇ 2014, 9:37 IST
Last Updated 31 ಮೇ 2014, 9:37 IST

ಧನ್‌ಬಾದ್/ಚತ್ರಾ(ಜಾರ್ಖಂಡ್)(ಪಿಟಿಐ): ಜಾರ್ಖಂಡ್‌ ರಾಜ್ಯದಾದ್ಯಂತ ಶನಿವಾರ ನಸುಕಿನಲ್ಲಿ ಬೀಸಿದ ಭಾರಿ ಬಿರುಗಾಳಿ ಘಟನೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ವಿದ್ಯುತ್‌ ಕಂಬಗಳು ಹಾಗೂ ನೂರಾರು ಮರಗಳು ಧರೆಗೆ ಉರುಳಿವೆ.

ಚತ್ರಾ ಜಿಲ್ಲೆಯ ಕೋನಾ ಗ್ರಾಮದಲ್ಲಿ ಮರದಡಿ ಮಲಗಿದ್ದ ಓರ್ವ ವ್ಯಕ್ತಿ, ಆತನ ಇಬ್ಬರು ಹೆಣ್ಣು ಮಕ್ಕಳು ಹಾಗೂ ಅವರ ಓರ್ವ ಮಗ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದೆಡೆ ಧನ್‌ಬಾದ್‌ ಜಿಲ್ಲೆಯಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಅಸುನೀಗಿದ್ದಾರೆ ಎಂದು ಧನ್‌ಬಾದ್‌ ಪೊಲೀಸರು ಹೇಳಿದ್ದಾರೆ.

ADVERTISEMENT

ಶನಿವಾರ ನಸುಕಿನ 4.30ರ ವೇಳೆಗೆ ಭಾರಿ ಬಿರುಗಾಳಿ ಬೀಸಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ರಾಂಚಿ, ಜೆಮ್‌ಷೆಡ್‌ಪುರ, ಹಜಾರಿಬಾಗ್‌ ಲತೇಹಾರ್‌ ಹಾಗೂ ಇತರ ಕೆಲವು ಜಿಲ್ಲೆಗಳಲ್ಲಿ ವಿದ್ಯುತ್ ಕಂಬಗಳು, ನೂರಾರು ಮರಗಳು ಬುಡಮೇಲಾಗಿವೆ.

ಬಿರುಗಾಳಿಯಿಂದ ಸಂಭವಿಸಿದ ನಷ್ಟದ  ಬಗ್ಗೆ ಅಂದಾಜು ಮಾಡಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.