ADVERTISEMENT

ಜಿಸ್ಯಾಟ್‌–17 ಉಪಗ್ರಹ ಯಶಸ್ವಿ ಉಡಾವಣೆ

ಪಿಟಿಐ
Published 29 ಜೂನ್ 2017, 5:45 IST
Last Updated 29 ಜೂನ್ 2017, 5:45 IST
ಜಿಸ್ಯಾಟ್‌–17 ಉಪಗ್ರಹ ಯಶಸ್ವಿ ಉಡಾವಣೆ
ಜಿಸ್ಯಾಟ್‌–17 ಉಪಗ್ರಹ ಯಶಸ್ವಿ ಉಡಾವಣೆ   

ಬೆಂಗಳೂರು: ದೇಶದ ನೂತನ ದೂರಸಂಪರ್ಕ ಉಪಗ್ರಹ ಜಿಸ್ಯಾಟ್‌–17 ಅನ್ನು ಫ್ರೆಂಚ್‌ ಗಾಯಾನದ ಕೌರೌ ಉಪಗ್ರಹ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

ಉಪಗ್ರಹವನ್ನು ಏರಿಯಾನ್‌–5 ವಿಎ–238 ಉಡಾವಣಾ ವಾಹಕದ ಮೂಲಕ ಬುಧವಾರ ತಡರಾತ್ರಿ 2.31ಕ್ಕೆ ಉಡಾವಣೆ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಾಹ್ಯಾಕಾಶ ಸಂಸ್ಥೆ, ‘ಜಿಸ್ಯಾಟ್‌–17 ಉಪಗ್ರಹವನ್ನು ಏರಿಯಾನ್‌–5 ವಿಎ238 ಮೂಲಕ, ಫ್ರೆಂಚ್ ಗಯಾನಾದ ಕೌರೌ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇಸ್ರೋದಿಂದ ಈಗಾಗಲೇ ಕಕ್ಷೆ ಸೇರಿರುವ 17 ದೂರಸಂಪರ್ಕ ಉಪಗ್ರಹಗಳ ಜತೆ ಇದು ಕಾರ್ಯನಿರ್ವಹಿಸಲಿದೆ’ ಎಂದು ತಿಳಿಸಿದೆ.

ADVERTISEMENT

ಈ ಬಗ್ಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟೆಫೇನ್‌ ಇಸ್ರೇಲ್‌ ಟ್ವಿಟರ್‌ ಮೂಲಕ ಸುದ್ದಿಯನ್ನು ಖಾತ್ರಿ ಪಡಿಸಿದ್ದಾರೆ. ಅವರು, ‘ಜಿಸ್ಯಾಟ್‌–17 ಯಶಸ್ವಿಯಾಗಿ ಕಕ್ಷೆಯನ್ನು ತಲುಪಿರುವುದು ಖಾತ್ರಿಯಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.